ಮಣಿಪಾಲ ಗಲಭೆ: ಚಿಂಚೋಳಿಯಲ್ಲಿ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ

IMG-20230825-WA0008
Published on

ಚಿಂಚೋಳಿ: ದೇಶದ ಸಂವಿಧಾನ ಪ್ರತಿಯೊಬ್ಬ ನಾಗರಿಕರ ಪರಿಪಾಲಿಸಬೇಕು. ಮಣಿಪುರದಲ್ಲಿ ಸಂವಿಧಾನ ಗಾಳಿಗೆ ತೂರಿ ಕೆಲವು ಸಮುದಾಯಗಳ ಮೇಲೆ ಶೋಷಣೆ ನಿರಂತರವಾಗಿ ಸಾಗುತ್ತಿರುವುದು ಅತ್ಯಂತ ಖಂಡನೀಯ ಎಂದು ಭಾರತ ಮುಕ್ತಿ ಮೋರ್ಚಾ ರಾಜ್ಯ ಸಂಚಾಲಕ ಮಾರುತಿ ಗಂಜಗೇರಾ ಸರ್ಕಾರಗಳ ವಿರುದ್ಧ ಹರಿಹಾಯ್ದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೂಡಲೇ ಮಣಿಪೂರ ರಾಜ್ಯದಲ್ಲಿ ಕುಕ್ಕಿ ಮತ್ತು ಬುಡಕಟ್ಟು ಕ್ರೈಸ್ತ ಸಮುದಾಯದ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಮತ್ತು ಚರ್ಚಗಳ ಧ್ವಂಸ ಪ್ರಕರಣಕ್ಕೆ ಕಾರಣಿಕರ್ತರಾಗಿರುವ ಕಿಡಿಗೇಡಿಗಳನ್ನು ದೇಶದಿಂದ ಗಡಿಪಾರು ಮಾಡಿ, ಅಲ್ಲಿರುವ ಕುಟುಂಬಗಳಿಗೆ ರಕ್ಷಣೆ ನೀಡಿ ಅವರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದರು.

ಚಿಂಚೋಳಿ ತಾಲೂಕಿನಲ್ಲಿ ಪದೆ ಪದೆ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರದ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಪಾಲಕರ ಮನದಲ್ಲಿ ಭಯದ ವಾತಾವರಣ ಉಂಟಾಗಿದೆ. ಆದ್ದರಿಂದ ಕೂಡಲೆ ಸಂಬಂಧಪಟ್ಟ ಇಲಾಖೆಯವರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಅರಿವಿನೊಂದಿಗೆ ಆತ್ಮಸ್ಥೈರ್ಯ ಹೆಚ್ಚಿಸಬೇಕು. 65 ವರ್ಷ ಮೇಲ್ಪಟ್ಟ ಎಲ್ಲಾ ರೈತರಿಗೆ ಸರ್ಕಾರದ ವತಿಯಿಂದ ತಿಂಗಳಿಗೆ 10000 ರೂ. ಮಾಶಾಸನ ನೀಡಬೇಕು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವರ್ಗಾವಣೆಗೊಂಡಿರುವ ಶಾಲಾ ಶಿಕ್ಷಕರನ್ನು ಬಿಡುಗಡೆ ಮಾಡದೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಹಿತದೃಷ್ಟಿಯಿಂದ ಮಾರ್ಚ್ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡಬೇಕು. ಚಿಂಚೋಳಿ ತಾಲೂಕಿನಲ್ಲಿ ಸುಮಾರು 60 ಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿರುರುವುದರಿಂದ ಕೂಡಲೆ ಅವುಗಳ ಕಡೆ ಗಮನ ಹರಿಸಿ ಗುಣಮಟ್ಟದ ಶಾಲಾ ಕೋಣೆಗಳು ನಿರ್ಮಿಸಬೇಕು ಎಂದು ಅಗ್ರಹಿಸಿದರು.

ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು. ಈ ಹೋರಾಟದಲ್ಲಿ ಗೋಪಾಲರಾವ್ ಕಟ್ಟಿಮನಿ, ಚಂದ್ರಕಾಂತ ಪಾಸ್ಟರ, ಜಗನ್ನಾಥ ಕಟ್ಟಿ, ಮಾರುತಿ ಜಾದವ, ಶಾಮರಾವ ಪತ್ರಕರ್ತರು,ಗೋಪಾಲ ಪೂಜಾರಿ, ವಿಜಯಕುಮಾರ ಘಾಟಗೆ, ರೇವಣಸಿದ್ದಪ್ಪ ಸುಭೆದಾರ,ಮೋಹನ ಐನಾಪೂರ, ನರಸಪ್ಪ ಕೀವಡನೂರ, ಹಾಫೀಜ್ ಸರ್ದಾರ್, ಸಂದೀಪ್ ದೇಗಲ್ಮಡಿ,ವೀರೇಶ ಹೋಸಮನಿ, ಪ್ರದೀಪ್ ಮೇತ್ರಿ, ಸುರೇಶ್ ಬಳಂಕರ, ಮೌನೇಶ್ ಗಾರಂಪಳ್ಳಿ, ನಾಗು ಕಟ್ಟಿ, ಹರ್ಷವರ್ಧನ ಚಿಮ್ಮನಕಟ್ಟಿ,ರಮೇಶ ಭಂಗೆ ಪಾಸ್ಟರ, ಸುರೇಶ್ ನಿರ್ಣಾಪಾಸ್ಟರ, ಪ್ರಭಾಕರ ಪಾಸ್ಟರ,ಸತೀಶ್ ಹೋಸಳ್ಳಿಪಾಸ್ಟರ, ರಾಬರ್ಟ್ ಪಾಸ್ಟರ, ಕಮಲಾಕರ ಪಾಸ್ಟರ, ಸುರೇಶ್ ಚಟ್ನಳ್ಳಿಪಾಸ್ಟರ, ಸುನೀಲ್ ಕಾರ್ಪಕಪಳ್ಳಿಪಾಸ್ಟರ,ಲಕ್ಷ್ಮಣ್ಮಾ ಶಾದಿಪೂರ ಪಾಸ್ಟರ, ಪ್ರಭಾಕರರೆಡ್ಡಿ ಪತ್ತೇಪೂರ ಪಾಸ್ಟರ, ಗಮ್ಮು ರಾಠೋಡ್, ಬಾಲಪ್ಪ ಮೇತ್ರಿ ಕಲ್ಲೂರ, ಅಶೋಕ ಬಾಬು ಕಲ್ಲೂರ,ಶ್ರೀಕೃಷ್ಣ ದೇಗಲ್ಮಡಿ, ಸಂವಿಧಾನ ದೇಗಲ್ಮಡಿ,ಸುಭಾಷ್ ತಾಡಪಳ್ಳಿ, ವಿಜಯಕುಮಾರ ತಾಡಪಳ್ಳಿ, ಶಿವುಕುಮಾರ ಕಟ್ಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net