ವೈಜ್ಞಾನಿಕ ಕೃಷಿಯಿಂದ ಲಾಭ

Untitled design (13)
ದೇವದುರ್ಗ ತಾಲೂಕು ಅಮರಾಪುರ ಗ್ರಾಮದಲ್ಲಿ ಹಿರಿಯ ರೈತ ದೇವೇಂದ್ರಪ್ಪಗೌಡ ನೇಗಿಲಿಗೆ ಪೂಜೆ ಮಾಡಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರಕ್ಕೆ ಚಾಲನೆ ನೀಡಿದರು. ಶಿಬಿರದ ಸಂಯೋಜಕ ಡಾ.ಎ.ಜಿ.ಶ್ರೀನಿವಾಸ್, ಪ್ರಾಧ್ಯಾಪಕ ಆರ್.ಡಿ.ವಿಶ್ವನಾಥ ನಾಯಕ, ರೈತರಾದ ರಂಗನಗೌಡ, ಶಿವರಾಜ್, ಪ್ರಜ್ವಲ್ ಪೊಪಾ ಇದ್ದರು.
Published on

ದೇವದುರ್ಗ: ವಿದ್ಯಾರ್ಥಿಗಳು ಒಕ್ಕಲುತವನ್ನು ಕೇವಲ ಪುಸ್ತಕದಲ್ಲಿ ಅಧ್ಯಯನ ಮಾಡುವುದರಿಂದ ಪರಿಪೂರ್ಣ ಜ್ಞಾನ ಪಡೆಯಲು ಸಾಧ್ಯವಿಲ್ಲ ಎಂದು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಸಂಯೋಜಕ ಡಾ.ಎ.ಜಿ.ಶ್ರೀನಿವಾಸ್ ಹೇಳಿದರು.

ಜಮೀನಿಗೆ ಭೇಟಿ ನೀಡಿ ಒಕ್ಕಲುತನದ ಅನುಭವ ಪಡೆಯಿರಿ

ತಾಲೂಕಿನ ಅಮಾರಪುರ ಗ್ರಾಮದಲ್ಲಿ ರಾಯಚೂರು ಕೃಷಿ ವಿಜ್ಞಾನ ವಿವಿಯ ಅಂತಿಮ ವಷರ್ದ ಕೃಷಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಗುರುವಾರ ಮಾತನಾಡಿದರು. ವಿದ್ಯಾರ್ಥಿಗಳು ನೇರವಾಗಿ ರೈತರ ಜಮೀನಿಗೆ ಭೇಟಿ ನೀಡಿ ಒಕ್ಕಲುತನದ ಅನುಭವ ಪಡೆಯಬೇಕು. ಪ್ರಸ್ತುತ ದಿನಮಾನದಲ್ಲಿ ಕೃಷಿಯತ್ತ ಯುವಕರ ಒಲವು ಕಡಿಮೆಯಾಗುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಕಂಪನಿಯತ್ತ ಮುಖ ಮಾಡುತ್ತಿದ್ದಾರೆ. ವೈಜ್ಞಾನಿಕ ಕೃಷಿಯಿಂದ ಲಾಭವಿದೆ ಎನ್ನುವುದು ಯುವಜನತೆಗೆ ಮನವರಿಕೆ ಮಾಡಿಕೊಬೇಕಿದೆ ಎಂದರು.

ರೈತರು ವಾತಾವರಣಕ್ಕೆ ತಕ್ಕಂತೆ ಬೆಳೆಗಳನ್ನು ಬಿತ್ತನೆ, ರಾಶಿ ಮಾಡುವುದು ಹಾಗೂ ಅಲ್ಲದೆ ಕೃಷಿ ಸಂಬಂಧಿತ ಮಾಹಿತಿ ಪಡೆಯಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಕೃಷಿ ಅಧ್ಯಯನಕ್ಕೆ ಪೂರಕ ಅಂಶಗಳು ಸಿಗಲಿವೆ. ರೈತರ ಜಮೀನನಲ್ಲಿ ಜ್ಞಾನದ ಜತೆಗೆ ಅನುಭವ ದೊರೆಯಲಿದೆ. ಹೀಗಾಗಿ ವಿದ್ಯಾರ್ಥಿಗಳು ಶಿಬಿರವನ್ನು ಸದ್ಬಳಕೆ ಮಾಡಿಕೊಂಡು ಅಧ್ಯಯನ ಮಾಡಬೇಕು ಎಂದು ಹೇಳಿದರು.

ಗ್ರಾಮದ ಹಿರಿಯ ರೈತ ದೇವೇಂದ್ರಪ್ಪಗೌಡ ನೇಗಿಲಿಗೆ ಪೂಜೆ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು. ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರ ಆರ್.ಡಿ.ವಿಶ್ವನಾಥ ನಾಯಕ, ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ್, ರೈತರಾದ ರಂಗನಗೌಡ, ಶಿವರಾಜ್, ಪ್ರಜ್ವಲ್ ಪೊ.ಪಾ., ಗ್ರಾಪಂ ಅಧ್ಯಕ್ಷ ಯಲ್ಲಪ್ಪ, ಸದಸ್ಯರಾದ ಭೀಮಣ್ಣ ಬಿರಾದರ್ ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net