ಮಠಮಾನ್ಯಗಳಿಂದ ಸಾಮರಸ್ಯ ವೃದ್ಧಿ

9Itagi1
ಚಿಕ್ಕಮುನವಳ್ಳಿಯ ಆರೂಢ ಮಠದಲ್ಲಿ ಈಚೆಗೆ ಜರುಗಿದ ಭಾವೈಕ್ಯತಾ ಸಮ್ಮೇಳನದಲ್ಲಿ ಶಿರಹಟ್ಟಿಯ ಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು. ಶಿವಪುತ್ರ ಸ್ವಾಮೀಜಿ, ಕಲ್ಮೇಶ್ವರ ಸ್ವಾಮೀಜಿ, ಲಿಂಗಾನಂದ ಪ್ರಭುಗಳು ಇತರರು ಇದ್ದರು.
Published on

ಇಟಗಿ: ಸಮಾಜವನ್ನು ಒಗ್ಗೂಡಿಸುವ ಮೂಲಕ ಮನುಷ್ಯರನ್ನು ಸಾಮರಸ್ಯದೊಂದಿಗೆ ಸನ್ಮಾರ್ಗದತ್ತ ಮುನ್ನಡೆಸುವಲ್ಲಿ ಮಠಮಾನ್ಯಗಳ ಪಾತ್ರ ಮುಖ್ಯ ಎಂದು ಶಿರಹಟ್ಟಿಯ ಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಸಮೀಪದ ಚಿಕ್ಕಮುನವಳ್ಳಿಯ ಆರೂಢ ಮಠದಲ್ಲಿ ಬ್ರಹ್ಮಲೀನ ಸದಾಶಿವಾನಂದ ಶ್ರೀಗಳ 13ನೇ ಪುಣ್ಯಸ್ಮರಣೆ ಹಾಗೂ 43ನೇ ಅಖಿಲ ಕರ್ನಾಟಕ ವೇದಾಂತ ಪರಿಷತ್ ನಿಮಿತ್ಯ ಈಚೆಗೆ ಜರುಗಿದ ಭಾವೈಕ್ಯತಾ ಸಮ್ಮೇಳನದಲ್ಲಿ ಮಾತನಾಡಿ, ಸರ್ವಧರ್ಮ ಸಮನ್ವಯತೆ ಕಾಪಾಡುವಲ್ಲಿ ಮಠಗಳು ಕಾರ್ಯ ಪ್ರಮುಖ ಎಂದರು. ಶ್ರೀ ಮಠದ ಪೀಠಾದ್ಯಕ್ಷ ಶಿವಪುತ್ರ ಸ್ವಾಮೀಜಿ, ಕಲ್ಮೇಶ್ವರ ಸ್ವಾಮೀಜಿ, ಲಿಂಗಾನಂದ ಪ್ರಭುಗಳು, ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬಾಬು ಚೌಗಲಾ, ಬಿಷ್ಟಪ್ಪ ಬನೋಶಿ, ರವಿಕಿರಣ ಹೆಗ್ಗೆರಿ, ವಿಠ್ಠಲ ಪದ್ಮಪ್ಪನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net