

ಚಿತ್ರದುರ್ಗ: ಮುರುಘಾಮಠದ ಐತಿಹಾಸಿಕ ರೂಪುರೇಷೆಯನ್ನು ಭವ್ಯವಾಗಿ ತ್ರಿಕರಣ ಶುದ್ಧಿಯಾಗಿ ರೂಪಿಸುವ ಕೆಲಸ ಎಲ್ಲ ಶ್ರೀಗಳಿಂದ ನಡೆದಿ ದ್ದು,ಅಂತಹವರ ಸಾಲಿನಲ್ಲಿ ಶ್ರೀ ಶಿರಸಂಗಿ ಮಹಾಲಿಂಗ ಸ್ವಾಮೀಜಿ ಅವರು ಇದ್ದಾರೆ ಎಂದು ನಿವೃತ್ತ ಪ್ರಾಚಾರ‌್ಯ ಎಸ್.ಎಂ.ಕೊಟ್ರೇಶಪ್ಪ ಅವರು ಹೇಳಿದರು.
ಮುರುಘಾಮಠದಿಂದ ನಗರದ ಗಾರೆಹಟ್ಟಿ ಚೋಳೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಅನುಭಾವ ಶ್ರಾ ವಣ ಕಾರ‌್ಯಕ್ರಮದಲ್ಲಿ ಶ್ರೀ ಮಹಾಲಿಂಗ ಸ್ವಾಮೀಜಿ ಅವರ ಕುರಿತು ಮಾತನಾಡಿ,ಶ್ರೀಮಠದ ಭವ್ಯ ಇತಿಹಾಸಕ್ಕೆ ಇದೆ ಶ್ರೀ ಶಿರಸಿಂಗಿ ಶ್ರೀಗಳ ಕೊಡುಗೆ ಇದೆ. ಶ್ರೀಗಳು ಒಮ್ಮೆ ಚಿತ್ರದುರ್ಗದಿಂದ ಉಳಿವಿವರೆಗೆ ನಡೆಸಿದ ಕಾಲ್ನಡಿಗೆ ಯಾತ್ರೆಗೆ ಲಕ್ಷಾಂತರ ಜನರು ಸೇರಿದ್ದರೆಂಬುದು ಇತಿಹಾಸವಾಗಿದೆ ಎಂದರು.
ಶಿಕ್ಷಕಿ ಟಿ.ಬಿ.ಅನಿತಾ ಅವರು ಗುಡ್ಡಾಪುರದ ದಾನಮ್ಮ ಅವರ ಕುರಿತು ಮಾತನಾಡಿದರು.ಶ್ರೀಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಮಾತು ಯಾವಾಗಲೂ ಜನರಲ್ಲಿ ಬದಲಾವಣೆ ತರುವಂತಿರಬೇಕೆಂದರು. ಸಾನಿಧ್ಯ ವಹಿ ಸಿದ್ದ ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವ ಪ್ರಭು ಸ್ವಾಮೀಜಿ ಅವರು ಮಾತನಾಡಿ,ಅನುಭಾವ ಶ್ರಾವಣ ಕಾರ‌್ಯಕ್ರಮದಿಂದ ಜನರ ಹೃದಯ ಹದವಾಗುತ್ತದೆ ಎಂದು ಆಶಿಸಿದರು.
ಚೌಡೇಶ್ವರಿ ದೇವಾಲಯದ ಸಮಿತಿ ಅಧ್ಯಕ್ಷ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷ್ಮೀ ಬಡಾವಣೆ ಅಭಿವೃದ್ಧಿ ಸಂಘದ ಅಧ್ಯಕ್ಷ ನಾ ಗೇಂದ್ರಯ್ಯ,ಗ್ರಾಪಂ ಸದಸ್ಯರಾದ ತಿಪ್ಪೇಸ್ವಾಮಿ,ಗಂಗಾಧರ,ರಾಜೇಶ್,ಗಾರೆಹಟ್ಟಿಯ ವಿಜಯಕುಮಾರ್,ಕೊಟ್ರೇಶ್,ಕೆಂಚಪ್ಪ ಇತರರು ಇದ್ದರು. ದೇವಾಲಯದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು.ಪ್ರಾಚಾರ್ಯ ಪಿಎಂಜೆ ರಾಜೇಶ್ ಸ್ವಾಗತಿಸಿ,ಕರಿಬಸಯ್ಯ ನಿರೂಪಿಸಿದರು.