ಮಠಗಳು ಸಮಾಜದ ಶ್ರೇಯಸ್ಸಿಗೆಶ್ರಮಿಸಲಿ

24KOTTUR 01
Published on

ಕೊಟ್ಟೂರು: ಮಠಗಳು ಸಮಾಜಮುಖಿಯಾದಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಚಾನುಕೋಟಿ ಮಠದಲ್ಲಿ ಪೀಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಷಷ್ಠಿ ಸಂಭ್ರಮ ಹಾಗೂ ಪಂಚಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಮಠಗಳು ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸಬೇಕು. ಹಸಿದವರಿಗೆ ಅನ್ನ ಮತ್ತು ಅಕ್ಷರ ದಾಸೋಹ ನೀಡಿದರೆ ಸಾರ್ಥಕವಾಗುತ್ತದೆ. ಚಾನುಕೋಟಿ ಮಠ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಚಾನುಕೋಟಿ ಮಠದ ಪೀಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ. ಆರಂಭದಲ್ಲಿ ಭಕ್ತರು ಪ್ರತಿ ದಿನ ಪ್ರಸಾದ ಕೊಟ್ಟು ಸಲುಹಿದರು. ನಂತರ ನಿತ್ಯ ಪ್ರಸಾದ, ಶಿಕ್ಷಣ, ಸಾಮೂಹಿಕ ವಿವಾಹ, ಆರೋಗ್ಯ ತಪಾಸಣಾ ಶಿಬಿರ ನಡೆಸಲು ಭಕ್ತರೇ ಕಾರಣಿಕರ್ತರು ಎಂದರು.

ಕಾಶಿಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾನಾಮಡುಗು ನಾಲ್ವಡಿ ಶಾರಣಾರ್ಯರು, ಕೂಡ್ಲಿಗಿ ಪ್ರಶಾಂತ ಸಾಗರ ಸ್ವಾಮೀಜಿ. ಪಪಂ ಸದಸ್ಯ ಬಾವಿಕಟ್ಟಿ ಶಿವಾನಂದ, ಮೊರಬದ ಕೊಟ್ರೇಶ, ಕೆ.ಶಿವಕುಮಾರಗೌಡ ಮುಂತಾದವರಿದ್ದರು. 60 ಜನ ಕಟ್ಟಡ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net