

ಅಥಣಿ ಗ್ರಾಮೀಣ: ಇಂಚಗೇರಿ ಸಂಪ್ರದಾಯದ ಮಠಗಳು ಜಾತ್ಯತೀತ ಪರಂಪರೆಯ ಆಧ್ಯಾತ್ಮಿಕ ತಾಣವಾಗಿವೆ ಎಂದು ಕಗ್ಗೋಡದ ಲಕ್ಕಪ್ಪ ಶರಣರು ಹೇಳಿದರು. ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಭೂಕೈಲಾಸ ಮಂದಿರದಲ್ಲಿ ದತ್ತಜಯಂತಿ ಹಾಗೂ ಅವಜೀಕರ ಮಹಾರಾಜರ 119ನೇ ಜಯಂತ್ಯುತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಅಸಂಖ್ಯಾತ ಭಕ್ತರನ್ನು ಹೊಂದಿರುವ ಇಂಚಗೇರಿ ಸಂಪ್ರದಾಯದ ಮಠಗಳಲ್ಲಿನ ಕಾರ್ಯಕ್ರಮಗಳು ಎಲ್ಲ ಸಮುದಾಯದ ಭಾವೈಕ್ಯ ಸಂದೇಶ ಸಾರುತ್ತವೆ. ಸಪ್ತಾಹ, ಸತ್ಸಂಗ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯ ಎಂದರು. ಭೂಕೈಲಾಸ ಮಂದಿರದ ಪೀಠಾಧೀಶ ಮಹಾದೇವ ಮಹಾರಾಜರು ಮಾತನಾಡಿದರು.
ಶೇಜಾರತಿ ಹಾಗೂ ದಾಸಬೋಧ ಪೂಜೆ ನೆರವೇರಿಸಲಾಯಿತು. ತುಂಗಳದ ಶಿವಲಿಂಗ ಶರಣರು ದಾಸಬೋಧ ವಾಚಿಸಿದರು. ಯಲಿಹಡಲಗಿಯ ಬಾಳು ಮಹಾರಾಜರು, ಗಿರೀಶ ಮಾಳಿ, ಗುರು ಮಗದುಮ್ಮ, ಆನಂದ ಕುಲಕರ್ಣಿ, ಮತ್ತಪ್ಪ ಸಂತಿ, ಬಸಪ್ಪ ಗುಮಟಿ, ವಕೀಲ ಪರಪ್ಪ ಬಿಸಗೂಪ್ಪಿ, ಮಂಗಲ ಗುಮಟಿ ಇತರರು ಇದ್ದರು.