

ಮಠಗಳ ಘನತೆ ಹಾಳು ಮಾಡಬಾರದು:ರಮೇಶ ಕತ್ತಿ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ: ಮಠ ಮಾನ್ಯಗಳಿಗಿರುವ ಘನತೆ ಹಾಳು ಮಾಡುವ ಕೆಲಸ ಸಮಾಜದ ಯಾವ ನಾಯಕರಿಂದಲೂ ಆಗಬಾರದು ಎಂದು ಮಾಜಿ ಸಂಸದ ರಮೇಶ ಕತ್ತಿ ಅಭಿಪ್ರಾಯಪಟ್ಟಿದ್ದಾರೆ.
ಬಾಗಲಕೋಟದಲ್ಲಿ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮಿಜಿ ಆರೋಗ್ಯವನ್ನು ಭಾನುವಾರ ವಿಚಾರಿಸಿರುವ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಪಂಚಮಸಾಲಿ ಪೀಠ ನಾಡಿನ ಅಸಂಖ್ಯಾತ ಲಿಂಗಾಯತರ ಭಕ್ತಿಪೀಠವಾಗಿದ್ದು, ಈ ಪೀಠದ ಕುರಿತು ಸಾರ್ವಜನಿಕ ಠೀಕೆ ಟಿಪ್ಪಣಿ ಮಾಡುವ ಬದಲು ನಾಲ್ಕು ಗೋಡೆಗಳ ನಡುವೆ ಸಮಸ್ಯೆ ಬಗೆಹರಿಸುವ ಮೂಲಕ ಮಠಗಳ ಹಾಗೂ ಮಠಾಧೀಶರ ಬಗೆಗೆ ಸಮಾಜದಲ್ಲಿರುವ ಗೌರವ ಉಳಿಸಿ ಬೆಳೆಸಬೇಕಾಗಿದೆ ಎಂದರು.
ರಾಜಕಾರಣ, ವಯಕ್ತಿಕ ಪ್ರತಿಷ್ಠೆಗಳು ಮಠಗಳಿಗೆ ಪ್ರವೇಶಿಸಿದರೆ ಸಮಾಜದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ. ಹಿರಿಯರ ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸುವುದು ಸೂಕ್ತವಾಗಿದೆ ಎಂದರು.
ಬಾಕ್ಸ:
ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಆರೋಗ್ಯ ವಿಚಾರಿಸಿದ್ದು, ಕ್ಷೇಮವಾಗಿದ್ದಾರೆ. ಅವರು ಶೀಘ್ರದಲ್ಲಿ ಗುಣಮುಖರಾಗಿ ಭಕ್ತರ ಸೇವೆಗೆ ಬರಲಿದ್ದಾರೆ.
ರಮೇಶ ಕತ್ತಿ
ಮಾಜಿ ಸಂಸದರು