ಮಠಗಳ ಘನತೆ ಹಾಳು ಮಾಡಬಾರದು

20Anand5
Published on

ಚಿಕ್ಕೋಡಿ: ಮಠಮಾನ್ಯಗಳಿಗಿರುವ ಘನತೆ ಹಾಳು ಮಾಡುವ ಕೆಲಸ ಸಮಾಜದ ಯಾವ ನಾಯಕರಿಂದಲೂ ಆಗಬಾರದು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಅಸ್ವಸ್ಥರಾಗಿ ಬಾಗಲಕೋಟೆ ಆಸ್ಪತ್ರೆಗೆ ದಾಖಲಾಗಿರುವ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆರೋಗ್ಯವನ್ನು ಭಾನುವಾರ ವಿಚಾರಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಪಂಚಮಸಾಲಿ ಪೀಠ ನಾಡಿನ ಅಸಂಖ್ಯಾತ ಲಿಂಗಾಯತರ ಭಕ್ತಿ ಪೀಠವಾಗಿದ್ದು, ಈ ಪೀಠದ ಕುರಿತು ಸಾರ್ವಜನಿಕ ಟೀಕೆ ಟಿಪ್ಪಣಿ ಮಾಡುವ ಬದಲು ನಾಲ್ಕು ಗೋಡೆಗಳ ನಡುವೆ ಸಮಸ್ಯೆ ಬಗೆಹರಿಸುವ ಮೂಲಕ ಮಠಗಳ ಹಾಗೂ ಮಠಾದೀಶರ ಬಗೆಗೆ ಸಮಾಜದಲ್ಲಿರುವ ಗೌರವ ಉಳಿಸಿ ಬೆಳೆಸಬೇಕಾಗಿದೆ ಎಂದರು. ರಾಜಕಾರಣ, ವೈಯಕ್ತಿಕ ಪ್ರತಿಷ್ಠೆ ಮಠಗಳಿಗೆ ಪ್ರವೇಶಿಸಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹಿರಿಯರ ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸುವುದು ಸೂಕ್ತವಾಗಿದೆ ಎಂದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆರೋಗ್ಯ ವಿಚಾರಿಸಿದ್ದು, ಕ್ಷೇಮವಾಗಿದ್ದಾರೆ. ಅವರು ಶೀಘ್ರದಲ್ಲಿ ಗುಣಮುಖರಾಗಿ ಭಕ್ತರ ಸೇವೆ ಕೈಗೊಳ್ಳಲಿದ್ದಾರೆ. | ರಮೇಶ ಕತ್ತಿ ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net