ಮಠ, ಮಂದಿರ ದರ್ಶನದಿಂದ ನೆಮ್ಮದಿ

23 skp 2
ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಾಲಯದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪೂಜೆ ಸಲ್ಲಿಸಿದರು. ವೀರನಗೌಡ, ಬೆಣ್ಣೆ ಪ್ರವೀಣ್, ರೇಣುಕಸ್ವಾಮಿ ಇತರರಿದ್ದರು.
Published on

ಶಿಕಾರಿಪುರ: ದೇವಾಲಯಗಳು, ಮಠ ಮಂದಿರಗಳು ನಮ್ಮ ಶ್ರದ್ಧಾ ಕೇಂದ್ರಗಳು ಎಂದು ಸಂಸದ ಬಿ.ವೈ. ರಾಘವೇಂದ್ರ

ಹೇಳಿದರು. ಶನಿವಾರ ಹುಚ್ಚರಾಯಸ್ವಾಮಿ ದರ್ಶನ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಧಾರ್ಮಿಕ ಚಿಂತನೆಗಳಿಂದ ನಾವು ರಾಗ, ದ್ವೇಷಗಳಿಂದ ಮುಕ್ತರಾಗುತ್ತೇವೆ. ಹುಚ್ಚರಾಯಸ್ವಾಮಿ ಅತ್ಯಂತ ಪ್ರಭಾವಿ ಎಂದರು. ಭಕ್ತರು ಕಡೆ ಶನಿವಾರ ಅಕಮಾಸದ ರೀತಿ ಮೂರು ಆಂಜನೇಯ ದೇವಾಲಯಗಳಾದ ಬ್ಯಾಡಗಿ ತಾಲೂಕು ಕದರಮಂಡಲಗಿ ಕಾಂತೇಶ, ಹಿರೇಕೆರೂರು ತಾಲೂಕು ಸಾತೇನಹಳ್ಳಿ ಶಾಂತೇಶ ಮತ್ತು ಶಿಕಾರಿಪುರದ ಹುಚ್ಚರಾಯಸ್ವಾಮಿ (ಭ್ರಾಂತೇಶ) ದರ್ಶನ ಮಾಡುವುದರಿಂದ ಪುಣ್ಯ ದೊರೆಯುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ವೀರನಗೌಡ, ಜಿಲ್ಲಾ ಕಾರ್ಯದರ್ಶಿ ಬೆಣ್ಣೆ ಪ್ರವೀಣ್, ಪುರಸಭೆ ಸದಸ್ಯ ರೇಣುಕಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net