ಮಟ್ಕಾ ದಂಧೆ ಐವರು ಬಂಧನ ಸಿಸಿಬಿ ಪೊಲೀಸರ ಕಾರ್ಯಾಚರಣೆ

Published on

ಮಂಗಳೂರು: ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮಟ್ಕ ದಂಧೆಯಲ್ಲಿ ನಿರತರಾಗಿದ್ದ ಐದು ಮಂದಿಯನ್ನು ಬಂಧಿಸಿದ್ದಾರೆ.

  1. ನಂದನ್ ಎಸ್ ನಾಯ್ಕ್(35), ಪ್ರಶಾಂತ್(47), ಅನಿಲ್ ಕುಮಾರ್(44), ದಿನಕರ ಆಳ್ವಾ(44), ಅನಿಲ್ ಕುಮಾರ್(42 ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರ ವಶದಿಂದ ನಗದು 30,130 ರೂ. ಹಾಗೂ 5 ಮೊಬೈಲ್ ಫೋನ್ ಗಳನ್ನು , ಹೀಗೆ ಒಟ್ಟು 66,130/- ರೂಪಾಯಿ ಮೌಲ್ಯದ ಸೊತ್ತುಗಳನ್ನು, ಮಟ್ಕಾ ಬರೆಯುವ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಮಂಗಳೂರು ದಕ್ಷಿಣ, ಬರ್ಕೆ, ಮಂಗಳೂರು ಉತ್ತರ, ಕಾವೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net