

ಯಾದಗಿರಿ: ಜಿ¯್ಲೆಯಲ್ಲಿ ಮಟ್ಕಾ, ಜೂಜಾಟ, ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ. ನಾಲ್ಕು ವಿಧಾನಸಭೆ ಕ್ಷೇತ್ರದ ಬಹುತೇಕ ಹಳ್ಳಿ ಮತ್ತು ತಾಂಡಾ ಅಂಗಡಿಗಳಲ್ಲಿ ಅಗ್ಗದ ಮದ್ಯ ದಂಧೆ ರಾಜಾರೋಷವಾಗಿ ನಡೆದಿದೆ ಎಂಬುದಕ್ಕೆ 15 ದಿನಗಳಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳೇ ಸಾಕ್ಷಿ.
ಯಾದಗಿರಿ ಗ್ರಾಮೀಣ, ವಡಗೇರಾ, ಸುರಪುರ, ಭೀಮರಾಯನಗುಡಿ, ಸೈದಾಪುರ, ಕೊಡೇಕಲï, ಗೋಗಿ, ಹುಣಸಗಿ ಪೊಲೀಸ್ ಠಾಣೆ ವ್ಯಾಪ್ತಿಯ ಊರುಗಳಲ್ಲಿ ಅಕ್ರಮ ಮದ್ಯ ಮಾರಾಟ ಹಗಲೂ-ರಾತ್ರಿ ಎನ್ನದೆ ದಿನದ 24 ತಾಸು ಬಿಂದಾಸ್ ನಡೆದಿದೆ. ಇನ್ನು ಈ ಹಳ್ಳಿಗಳು ಸೇರಿ ಗುರುಮಠಕಲï, ಶಹಾಪುರ, ನಾರಾಯಣಪುರ, ಕೆಂಭಾವಿ ವ್ಯಾಪ್ತಿಯ ಊರುಗಳಲ್ಲಿ ಜೂಜಾಟ ಮತ್ತು ಮಟ್ಕಾ ದಂಧೆ ಜೋರಾಗಿದೆ.
ಜು.26ರಿಂದ ಆ.11 (ಕೇವಲ 15 ದಿನ)ರವರೆಗೆ ವಿವಿಧೆಡೆ ದಾಖಲಾಗಿರುವ 25 ಪ್ರಕರಣಗಳು ಮಟಕಾ ಮತ್ತು ಜೂಜಾಟಕ್ಕೆ ಸಂಬAಧಿಸಿದ್ದಾಗಿವೆ. 40 ಜನರ ವಿರುದ್ಧ ದೂರು ದಾಖಲಿಸಿ 33,140 ರೂ. ಜಪ್ತಿ ಮಾಡಲಾಗಿದೆ. ಇನ್ನು ಮದ್ಯ ಮಾರಾಟಕ್ಕೆ ಸಂಬAಧಿಸಿದAತೆ 9 ಜನರ ವಿರುದ್ಧ ದೂರು ದಾಖಲಾಗಿದ್ದು, ಸುಮಾರು 10 ಸಾವಿರ ರೂ. ಮೌಲ್ಯದ ಅಗ್ಗದ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಹಿಂದುಳಿದ ಮತ್ತು ಸಣ್ಣ ಜಿ¯್ಲÉ ಯಾದಗಿರಿಯಲ್ಲಿ ಮಟ್ಕಾ ಮತ್ತು ಜೂಜಾಟದಿಂದ ಸಾವಿರಾರು ಮನೆಗಳು ಹಾಳಾಗಿದ್ದು, ನೂರಾರು ಕುಟುಂಬಗಳು ಬೀದಿಗೆ ಬಂದಿವೆ. ಆದರೆ ಕಡಿವಾಣ ಹಾಕಬೇಕಾದ ಜಿ¯್ಲÁಡಳಿತ, ಜಿ¯್ಲÁ ಪೊಲೀಸ್ ಮತ್ತು ಅಬಕಾರಿ ಇಲಾಖೆ ಕುಂಭಕರ್ಣ ನಿದ್ರೆಗೆ ಜಾರಿದ್ದರಿಂದ ದಂಧೆಕೋರರಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ.
ಇಚ್ಛಾಶಕ್ತಿ ಕೊರತೆ: ಜಿ¯್ಲÉಯ ಜನಪ್ರತಿನಿಧಿಗಳು ಗಟ್ಟಿಯಾಗಿರಬೇಕು. ಆಡಳಿತದ ಮೇಲೆ ಹಿಡಿತ ಹೊಂದಿರಬೇಕು. ಅಕ್ರಮ ದಂಧೆ ತಡೆಯಲು ಇಚ್ಛಾಶಕ್ತಿ ಬೇಕು. ಆಗಾಗ್ಗೆ ಸಭೆಗಳನ್ನು ನಡೆಸಿ ಚುರುಕು ಮುಟ್ಟಿಸಬೇಕು. ಆದರೆ ಇದ್ಯಾವುರೂ ಜಿ¯್ಲÉಯಲ್ಲಿ ಕಾಣಿಸುತ್ತಿಲ್ಲ. ಪ್ರತಿಪP್ಷÀಗಳು, ವಿವಿಧ ಸಂಘಟನೆಗಳು ಸಹ ಈ ಬಗ್ಗೆ ದಿಟ್ಟತನದ ಹೇಳಿಕೆ, ಹೋರಾಟಕ್ಕೆ ಮುಂದಾಗದ್ದರಿAದ ಅಕ್ರಮ ದಂಧೆ ಅಧಿಕೃತ ಎನ್ನುವಂತೆ ನಡೆದಿದೆ.
ಮಟ್ಕಾ ದಂಧೆಗೆ ಮೊಬೈಲï ಸಾಕು!: ಈಗ ಮೊಬೈಲï ಮೂಲಕವೇ ಬಹುತೇಕ ಕಡೆ ಮಟ್ಕಾ ದಂಧೆ ನಡೆದಿದೆ. ಮಟ್ಕಾ ನಂಬರ್ ಬರೆದುಕೊಳ್ಳುವವರು ಇಂಥಲ್ಲೇ ಇರಬೇಕು ಅಂತೇನಿಲ್ಲ. ಬರೆದುಕೊಳ್ಳುವ ಮತ್ತು ನಂಬರ್ ಹಚ್ಚುವವರ ನಡುವೆ ಸಂಪರ್ಕವಿದ್ದರೆ ಸಾಕು, ಎಲ್ಲಿದ್ದರೂ ಈ ದಂಧೆ ನಡೆಯುತ್ತದೆ. ಹಿಂದೆಲ್ಲ ಅಲ್ಲಲ್ಲಿ ಕೆಲ ಪಾಯಿಂಟ್ ಇರುತ್ತಿದ್ದವು. ಬರೆದುಕೊಳ್ಳುವವರು ಅಲ್ಲಿ ಇರುತ್ತಿದ್ದರು. ಆಡುವವರು ಅಲ್ಲಿಗೆ ಹೋಗಿ ಬೇಕಾದ ನಂಬರ್ ಬರೆಸಿ ಹಣ ಕೊಡುತ್ತಿದ್ದರು. ಆದರೀಗ ಬದಲಾದ ವ್ಯವಸ್ಥೆಯಲ್ಲಿ ಈ ದಂಧೆ ಹೈಟೆಕ್ ಆಗಿದೆ. ಶೇ.90 ದಂಧೆ ಮೊಬೈಲï ಮೂಲಕವೇ ನಡೆಯುತ್ತದೆ. ನಂಬರ್ ಹೇಳುವುದು, ಹಣ ಹಾಕುವುದು, ಆಡಿದ ನಂಬರ್ ಬಂದರೆ ಹಣ ಪಡೆಯುವುದು ಸಹ ಫೋನ್ ಪೇ, ಜಿ ಪೇ ಮೂಲಕ ಸಾಧ್ಯವಿದೆ. ಹೀಗಾಗಿ ಯಾರು ದಂಧೆ ನಡೆಸುತ್ತಿz್ದÁರೆ ಎಂಬುದು ಖಚಿತವಾಗಿ ಹೇಳುವುದು ಪೊಲೀಸರಿಗೆ ಸವಾಲಾಗಿದೆ. ಆದರೂ ಖಚಿತ ಮಾಹಿತಿ ಕೊಡುವವರ ಮೂಲಕ ಮೂಗುದಾರ ಹಾಕಲಾಗುತ್ತಿದೆಯಾದರೂ ಕಠಿಣ ಕ್ರಮ ಇಲ್ಲದೆ ಎಗ್ಗಿಲ್ಲದೆ ದಂಧೆ ಮುಂದುವರಿದಿದೆ ಎಂಬುದು ಜನಾಭಿಪ್ರಾಯ.
ಜೂಜಾಟಕ್ಕೆ ಮಧ್ಯವರ್ತಿಗಳೇ ಸಾಥ್: ಇನ್ನು ಹಳ್ಳಿಗಳ ಸಣ್ಣ ಸಣ್ಣ ಹೋಟೆಲï, ಹೊಲಗಳ ಬದುವಿಗಿರುವ ಮರಗಳ ಕೆಳಗೆ, ಕೆಲವೆಡೆ ಹಾಳುಬಿದ್ದ ಗುಡಿ-ಗುಂಡಾರಗಳ ಛಾವಣಿ ಕೆಳಗೆ ಜೂಜಾಟ ನಡೆಯುತ್ತದೆ. ಜೂಜು ಆಡಿಸಲೇಂದೇ ಮಧ್ಯವರ್ತಿಗಳು ಇರುತ್ತಾರಂತೆ. ಜೂಜುಕೋರರಿಂದ ಆಟಕ್ಕೆ ಇಂತಿಷ್ಟು ಹಣ ಪಡೆದು ಕುಂತಲ್ಲೇ ಚಹಾ-ಪಾಣಿ, ಬೀಡಿ-ಸಿಗರೇಟ್, ಗುಟ್ಖಾ ವ್ಯವಸ್ಥೆ ಮಾಡುತ್ತಾರೆ. ಪಟ್ಟಣ, ನಗರ ಪ್ರದೇಶಗಳಲ್ಲಿ ಊರ ಹೊರಗೆ ಖಾಲಿ ಇರುವ ಮನೆಗಳನ್ನು ಬಾಡಿಗೆ ಇಲ್ಲವೆ ಹಳೆಯ ಲಾಡ್ಜ್ಗಳಲ್ಲಿ ಕೋಣೆ ಬುಕ್ ಮಾಡಿ ಜೂಜಾಟ ಆಡುವವರ ಸಂಖ್ಯೆ ಅಧಿಕವಾಗಿದೆ.
ಕಿರಾಣಿ ಅಂಗಡಿಗಳೇ ವೈನ್ ಶಾಪ್!: ಮದ್ಯ ಮಾರಾಟಕ್ಕೆ ಹಳ್ಳಿಗಳಲ್ಲಿನ ಕಿರಾಣಿ ಅಂಗಡಿಗಳೇ ವೈನ್ ಶಾಪ್ ಆಗಿ ಮಾರ್ಪಟ್ಟಿವೆ. ನಗರ, ಪಟ್ಟಣದಿಂದ ಅಗ್ಗದ ದರದಲ್ಲಿ ಸಿಗುವ ವಿವಿಧ ಹೆಸರಿನ ಮದ್ಯ ಖರೀದಿಸಿ ಹೆಚ್ಚಿನ ದರಕ್ಕೆ ಮಾರುವ ಕರಾಳ ದಂಧೆಗೆ ಕಡಿವಾಣ ಹಾಕಬೇಕಾದ ಅಬಕಾರಿ ಇಲಾಖೆ, ಚುನಾವಣೆ ನೀತಿ ಸಂಹಿತೆ ವೇಳೆ ನಿತ್ಯ ತಾಂಡಾ ಮತ್ತಿತ್ತರ ಕಡೆ ಹೆಂಡ ತಯಾರಿಸುವ ವಸ್ತು ಮತ್ತು ಇವುಗಳಲ್ಲಿ ತೊಡಗಿದವರನ್ನು ಹಿಡಿದು ಕೇಸ್ ಹಾಕಿ ಈಗ ಕುಂಭಕರ್ಣ ನಿz್ದÉಗೆ ಜಾರಿದಂತಿದೆ.