ಮಟ್ಕಾ ಆಡಿಸುತ್ತಿದ್ದವರು ಪೊಲೀಸರ ಬಲೆಗೆ

arest
Published on

ಹಳಿಯಾಳ: ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯ ವಿಶೇಷ ಪತ್ತೆ ದಳ ಮತ್ತು ಹಳಿಯಾಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಓಸಿ, ಮಟ್ಕಾ, ಜೂಗಾರು ಆಟ ನಡೆಸುತ್ತಿದ್ದ ಪಟ್ಟಣದ 8 ಜನರನ್ನು ಶುಕ್ರವಾರ ಬಂಧಿಸಿದ್ದಾರೆ.
ಬಂಧಿತರಿಂದ 35,000 ರೂ. ನಗದು, ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮುಖ್ಯ ಬುಕ್ಕಿ ಪಟ್ಟಣದ ಚಂದ್ರಕಾಂತ ಸಿದ್ದಪ್ಪ ಗೊಂದಳಿ ಹಾಗೂ ಆತನ ಸಹಚರರಾದ ಜಾಕೀರ್ ಹುಸೇನ್ ಮಹಮ್ಮದ್ ಹನೀಫ್ ಸನದಿ, ಉಮೇಶ ಯಲ್ಲಪ್ಪ ಘಟಕಾಂಬ್ಳೆ, ಭಾಗವತಿ ಗ್ರಾಮದ ಮುನೀರ್ ಮಹಮ್ಮದ್ ಸಾಬ್ ಬಳಗಾರ, ಮೈಕಲ್ ಸೈಮನ್ ಸಿದ್ದಿ, ಮುತ್ತಲಮುರಿ ಗ್ರಾಮದ ಅಕ್ಬರ್ ನನ್ನೆಸಾಬ್ ಅರ್ಲವಾಡ , ಮುರ್ಕವಾಡ ಗ್ರಾಮದ ಸುನೀಲ ಮಂಜುನಾಥ ವಡ್ಡರ, ಹವಗಿ ಗ್ರಾಮದ ಆಸೀಫ್ ಇಮಾಮ ಹುಸೇನ್ ಹುಲಕೊಪ್ಪ ಬಂಧಿತ ಆರೋಪಿಗಳು.
ಈ ಕುರಿತು ಹಳಿಯಾಳ ಠಾಣೆಯಲ್ಲಿ ಪ್ರತ್ಯೇಕ 7 ಪ್ರಕರಣಗಳು ದಾಖಲಾಗಿವೆ.
ಜನಸಂಪರ್ಕ ಸಭೆಯಲ್ಲಿ ದೂರು: ಕೆಲ ದಿನಗಳ ಹಿಂದೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಯೋಜಿಸಿದ್ದ ಜನಸಂಪರ್ಕಸಭೆಯಲ್ಲಿ ಎಸ್​ಪಿ ಡಾ. ಸುಮನ್ ಪೆನ್ನೇಕರ ಎದುರು ಸಾರ್ವಜನಿಕರು ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಓಸಿ, ಮಟ್ಕಾ, ಜೂಗಾರಾಟ ಮತ್ತು ಅಕ್ರಮ ಮದ್ಯ ಮಾರಾಟ ಕುರಿತು ದೂರು ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net