ಮಟ್ಕಾ ಅಡ್ಡೆ ಮೇಲೆ ಪೊಲೀಸರ ದಾಳಿ: ಎಂಟು ಮಂದಿ ಬಂಧನ

ಮಟ್ಕಾ ಅಡ್ಡೆ ಮೇಲೆ ಪೊಲೀಸರ ದಾಳಿ: ಎಂಟು ಮಂದಿ ಬಂಧನ
Published on

ಹಾಸನ: ನಗರದಲ್ಲಿ ಮಟ್ಕಾ ಅಡ್ಡೆ ಮೇಲೆ ಪೊಲೀಸರು ಬುಧವಾರ ದಾಳಿ ನಡೆಸಿ ಮಟ್ಕಾ ಆಡುತ್ತಿದ್ದ ಎಂಟು ಜನರನ್ನು ಬಂಧಿಸಿ, ಬಂಧಿತರಿಂದ 36,930 ರೂ. ವಶಕ್ಕೆ ಪಡೆದಿದ್ದಾರೆ. ವಸೀಂ, ಜಾಫರ್ ಸಾದಿಕ್, ನಿಸಾರ್ ಅಹಮದ್, ನಯೀಮ್, ರಾಮ್‌ಕುಮಾರ್, ರಾಜಾಚಾರಿ, ದಿಲೀಪ್‌ಕುಮಾರ್, ಬಸವರಾಜ್ ಬಂಧಿತರು. ಬಂಧಿತರಿಂದ 36,930 ನಗದು ವಶಪಡಿಸಿಕೊಂಡಿದ್ದಾರೆ. ಮಟ್ಕಾ ಹೆಸರಿನಲ್ಲಿ ಅಮಾಯಕರನ್ನು ಜೂಜಿಗೆ ತಳ್ಳಿ ಹಣ ಲಪಟಾಯಿಸುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಮೇರೆಗೆ ಹಾಸನ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಟ್ಕಾ ಗ್ಯಾಂಗ್ ಅರೆಸ್ಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net