ಮಟಕಾ ಅಡ್ಡೆಯ ಮೇಲೆ ದಾಳಿ: ಇಬ್ಬರ ಬಂಧನ

crime
Published on

ಮಟಕಾ ಅಡ್ಡೆಯ ಮೇಲೆ ದಾಳಿ: ಇಬ್ಬರ ಬಂಧನ

ಬೆಳಗಾವಿ: ತಾಲೂಕಿನ ಮಚ್ಚೆ ಗ್ರಾಮದಲ್ಲಿ ಮಟಕಾ ಆಟದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೊಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.

ತಾಲುಕಿನ ಕೆಂಚನಟ್ಟಿಯ ಬಸಪ್ಪ ಬಾಳಪ್ಪ ಕೊನಕೇರಿ( 31), ನಿಂಗ್ಯಾನಟ್ಟಿಯ ಪ್ರಕಾಶ ಲಗಮಾ ತಲ್ಲೂರಿ( 28 ) ಬಂಧಿತರು.ಇವರು ಕಲ್ಯಾಣ ಮಟಕಾ ಎಂಬ ಅಂಕಿ ಸಂಖ್ಯೆ ಆಟದಲ್ಲಿ ತೊಡಗಿದ್ದ ವೇಳೆ ಪೊಲೀಸರ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು ,ದಾಳಿ ವೇಳೆ 2700 ನಗದು ಹಣ ಓಸಿ ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ‌. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net