ಮಜ್ದೂರ್​ ಕಾರ್ಡ್​ ಅರಿವು ಕಾರ್ಯಾಗಾರ

mm 30-8
Published on

ವಿಜಯಪುರ : ಜಿಲ್ಲಾ ಕಾಂಗ್ರೆಸ್​ ಅಲ್ಪಸಂಖ್ಯಾತ ಟಕದ ವತಿಯಿಂದ ಮಜ್ದೂರ್​ ಕಾರ್ಡ್​ ಪಡೆದುಕೊಳ್ಳುವ ನಿಟ್ಟಿನಲ್ಲಿ ಅರಿವು ಮೂಡಿಸುವ ಉಚಿತ ಕಾರ್ಯಾಗಾರ ಇತ್ತೀಚೆಗೆ ನಡೆಯಿತು.

ಈ ಕಾರ್ಡ್​ ಪಡೆದುಕೊಳ್ಳುವ ವಿಧಾನ, ಸೌಲಭ್ಯಗಳ ಕುರಿತು ಸಮಗ್ರವಾಗಿ ತಿಳಿವಳಿಕೆ ನೀಡಲಾಯಿತು. ಅಲ್ಲದೆ, ಶಿಬಿರದಲ್ಲಿ ಕಾರ್ಮಿಕರಿಗೆ ತಣದ ನೋಂದಣಿ, ದಾಖಲೆ ಪರಿಶೀಲನೆ ಮತ್ತು ಲೇಬರ್​ ಕಾರ್ಡ್​ ಪಡೆಯಲು ಮಾರ್ಗದರ್ಶನ ನೀಡಲಾಯಿತು.

ಕಾಂಗ್ರೆಸ್​ ಅಲ್ಪಸಂಖ್ಯಾತ ಟಕದ ಜಿಲ್ಲಾಧ್ಯ ಶಕೀಲ್​ ಬಾಗಮಾರೆ ಮಾತನಾಡಿ, ಕಾರ್ಮಿಕರು ಈ ದೇಶದ ಉಸಿರು. ಕಾರ್ಮಿಕರೇ ಈ ದೇಶದ ಶಕ್ತಿ.

ಕಾರ್ಮಿಕರ ಕಲ್ಯಾಣವನ್ನು ಡಾ. ಬಿ.ಆರ್​. ಅಂಬೇಡ್ಕರ್​ ಬಹುಮುಖ್ಯ ಧ್ಯೇಯವಾಗಿಸಿಕೊಂಡಿದ್ದರು ಎಂದ ಅವರು, ಕಾರ್ಮಿಕರಿಗಾಗಿ ಹಲವು ಸೌಲಭ್ಯಗಳಿವೆ, ಆದರೆ ಸೌಲಭ್ಯಗಳ ಬಗ್ಗೆ ಅರಿವಿನ ಸಕೊರತೆಯಿಂದ ಕಾರ್ಮಿಕರಿಗೆ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದು ತಿಳಿಸಿದರು.

ದಿನನಿತ್ಯ ತೊಂದರೆ ಅನುಭವಿಸುವ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳು ನೇರವಾಗಿ ಒದಗಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಕಾರ್ಮಿಕರು ತಮ್ಮ ಮಜದೂರ್​ ಕಾರ್ಡ್​ ಪಡೆಯುವ ಹತೆಗೆ ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೇ ಸರ್ಕಾರಿ ಯೋಜನೆಗಳ ಲಾಭ ಪಡೆಯಬೇಕೆಂದು ಸಲಹೆ ನೀಡಿದರು.

ವಿಜಯಪುರದಲ್ಲಿ ಮಜ್ದೂರ್​ ಕಾರ್ಡ್​ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net