

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಧ್ಯದ ರಾಯಪುರದ ಐಓಸಿಎಲ್ ಎದುರಿನ ಶ್ರೀ ಕಲ್ಮೇಶ್ವರ ದೇವಸ್ಥಾನವನ್ನು ನಗರದ ಜಿತೇಂದ್ರ ಮಜೇಥಿಯಾ ಪರಿವಾರದವರು ನಿರ್ಮಾಣ ಮಾಡಿದ್ದಾರೆ.
ಇದು ಪುರಾತನ ದೇವಸ್ಥಾನವಾಗಿದ್ದು, ಇದೀಗ ಸುಂದರ ಗುಡಿ ನಿರ್ವಿುಸಲಾಗಿದೆ.
ಹಲವು ವರ್ಷಗಳ ಹಿಂದೆ ಈ ಪ್ರದೇಶವು ಗ್ರಾಮವಾಗಿತ್ತು. ಶತಮಾನಗಳ ಹಿಂದೆ ಸಾಂಕ್ರಾಮಿಕ ರೋಗದಿಂದಾಗಿ ಇಲ್ಲಿದ್ದ ಊರು ಸ್ಥಳಾಂತರವಾಯಿತು ಎಂದು ಗ್ರಾಮದ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಇಲ್ಲಿಯ ಹಳೇ ದೇವಸ್ಥಾನವನ್ನು ಮಜೇಥಿಯಾ ಕುಟುಂಬದವರು ಅಭಿವೃದ್ಧಿ ಪಡಿಸಿದಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೂನ್ 25 ಹಾಗೂ 26 ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೂಜೆ, ಧಾರ್ವಿುಕ ವಿಧಿ ವಿಧಾನಗಳು ನಡೆಯಲಿವೆ. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.