ಮಗುವಿನೊಂದಿಗೆ ವಿಎ ಪ್ರತಿಭಟನೆ

18kdl1
Published on

ಕುಂದಗೋಳ: ಆರು ತಿಂಗಳಿಂದ ವೇತನವಿಲ್ಲದೆ ಕುಟುಂಬ ನಿರ್ವಹಣೆಗಾಗಿ ಗ್ರಾಮಲೆಕ್ಕಾಧಿಕಾರಿಯೊಬ್ಬರು ಪುಟ್ಟ ಮಗುವಿನೊಂದಿಗೆ ಮಳೆ-ಗಾಳಿ ಎನ್ನದೇ ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ನಡೆಸಿದ ಘಟನೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ನಡೆಯಿತು.

ತಾಲೂಕಿನ ಪಶುಪತಿಹಾಳ ಗ್ರಾಮಲೆಕ್ಕಾಧಿಕಾರಿ ವಿನೋದಾ ಸಾತಕೋಡಿ ಅವರು ಹೆರಿಗೆ ಬಳಿಕ ಕೆಲಸಕ್ಕೆ ಹಾಜರಾದ ಮೇಲೆ ಆರು ತಿಂಗಳಿಂದ ವೇತನ ನೀಡಿಲ್ಲ. ಈ ಕುರಿತು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ವೇತನ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅನೇಕ ಕಾರಣ ಹೇಳಿ ತಹಸೀಲ್ದಾರ್ ಬಸವರಾಜ ಮೆಳವಂಕಿ, ಇ.ಎಸ್.ಟಿ. ಉದಯಕುಮಾರ ಅವರು ಸಂಬಳ ನೀಡಲು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬೆಳಗ್ಗೆ ಕಚೇರಿಗೆ ಆಗಮಿಸಿದಾಗ ತಹಸೀಲ್ದಾರ್ ಇಲ್ಲದಿರುವುದರಿಂದ ಕಚೇರಿ ಆವರಣದಲ್ಲಿ ಕುಳಿತು ಭಿಕ್ಷೆ ಬೇಡಲು ಆರಂಭಿಸಿದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರದಾಡಿತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಗ್ರಾಮಲೆಕ್ಕಾಧಿಕಾರಿ ಕುಟುಂಬದವರನ್ನು ಸಮಾಧಾನಪಡಿಸಿ ಮನೆಗೆ ಕಳುಹಿಸಿದರು. ಈ ಕುರಿತು ತಹಸೀಲ್ದಾರರನ್ನು ಸಂರ್ಪಸಲು ಕರೆ ಮಾಡಿದರೆ ಅವರು ಸ್ವೀಕರಿಸಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net