ಮಗುವಿನ ವಿಶೇಷ ಗುಣ ಗುರುತಿಸುವ ಹೊಣೆ ಶಿಕ್ಷಕರದು

ctd---1...
Published on

ಚಿತ್ರದುರ್ಗ: ಪ್ರತಿ ಮಗುವಿನಲ್ಲೂ ಇರುವ ವಿಶೇಷ ಗುಣಗಳನ್ನು ಗುರುತಿಸುವ ಹೊಣೆ ಶಿಕ್ಷಕರದಾಗಿರುತ್ತದೆ ಎಂದು ಪ್ರಾಚಾರ್ಯೆ ಡಾ. ಎಚ್.ಬಿ. ಪ್ರೀತಿ ಹೇಳಿದರು.

ರಾಜ್ಯ ಬಾಲಭವನ ಸೊಸೈಟಿ, ಜಿಪಂ, ಜಿಲ್ಲಾ, ತಾಲೂಕು ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಳಲ್ಕೆರೆ ತಾಲೂಕಿನ ಹನುಮಂತದೇವರ ಕಣಿವೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಯುಗದಲ್ಲಿ ಮಕ್ಕಳು ಎಲೆಕ್ಟ್ರಾನಿಕ್ ಮಾಧ್ಯಮಗಳ ದಾಸರಾಗುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡದಂತೆ ಕೌಶಲಗಳನ್ನು ಕಲಿಸಿದರೆ ಸಮಾಜದ ಮುಖ್ಯವಾಹಿನಿಗೆ ಬರಲು ಅವರಿಗೆ ಅನುಕೂಲವಾಗುತ್ತದೆ ಎಂದರು.

ಜಿಲ್ಲಾ ಬಾಲಭವನ ಕಾರ್ಯಕ್ರಮ ಸಂಯೋಜಕ ಡಿ.ಶ್ರೀಕುಮಾರ್ ಮಾತನಾಡಿದರು. ಭಾಷಣ, ಪ್ರಬಂಧ, ಗಾಯನ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಸಂಗೀತ ಶಿಕ್ಷಕ ಮಹಾರುದ್ರಯ್ಯ, ಶಿಕ್ಷಕರಾದ ತಿಮ್ಮೇಶ್, ಮೊಹಮದ್‌ರಸೂಲ್, ರೇಖಾಬಾಯಿ, ಆಶಾರಾಣಿ, ಮನು, ರವಿ, ಕುಮಾರಿ, ಶ್ರೀಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net