ಮಗುಚಿದ ಟಿಪ್ಪರ್ ಲಾರಿ

ldh lory
ಜಮ್ಮಾಪುರ ಗ್ರಾಮದ ರಸ್ತೆ ತಿರುವಿನಲ್ಲಿ ಬಿದ್ದ ಟಿಪ್ಪರ್ ಲಾರಿಯನ್ನು ಸ್ಥಳೀಯರು ವೀಕ್ಷಿಸಿದರು.
Published on

ಲಿಂಗದಹಳ್ಳಿ: ಜಮ್ಮಾಪುರ ಗ್ರಾಮದ ರಸ್ತೆ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಶಾಲಾ ವಾಹನಕ್ಕೆ ಮುಂದೆ ಸಾಗಲು ಸ್ಥಳಾವಕಾಶ ಮಾಡಿಕೊಡಲು ಟಿಪ್ಪರ್ ಚಾಲಕ ವಾಹನವನ್ನು ರಸ್ತೆ ಬದಿಗೆ ತೆಗೆದುಕೊಂಡಾಗ ಟಿಪ್ಪರ್‌ಲಾರಿ ಮಗುಚಿ ಬಿದ್ದಿದ್ದು, ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಶಾಲಾ ವಿದ್ಯಾರ್ಥಿಗಳು ಸಂಚರಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯಬೇಕಾಗಿದ್ದ ಟಿಪ್ಪರ್ ಲಾರಿಯನ್ನು ಟಿಪ್ಪರ್ ಚಾಲಕ ಸಮಯ ಪ್ರಜ್ಞೆಯಿಂದ ರಸ್ತೆ ಬದಿಗೆ ವಾಹನ ತೆಗೆದುಕೊಂಡು ಹೋಗಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net