ಮಂಗಳೂರು: ಕಾನೂನು ಬಾಹಿರವಾಗಿ ಮಕ್ಕಳ ಮಾರಾಟ ಪ್ರಕರಣವನ್ನು ಮಂಗಳೂರು ಪೊಲೀಸರು ಪತ್ತೆ ಮಾಡಿದ್ದಾರೆ.
ಮೂಲ್ಕಿ ಮೂಲದ ರಯಾನ್ (30) ಬಂಧಿತ ಆರೋಪಿ. ಹಾಸನ ಮೂಲದ ಹೆಣ್ಣು ಮಗುವನ್ನು ಕಾರ್ಕಳ ಮೂಲದ ಕವಿತಾ ಎಂಬವರಿಗೆ ಮಾರಾಟ ಮಾಡಿದ್ದ. ಮಕ್ಕಳನ್ನು ಮೂರು ಲಕ್ಷಕ್ಕೆ ಖರೀದಿಸಿ ಆರು ಲಕ್ಷಕ್ಕೆ ಮಾರಾಟ ಮಾಡುತ್ತಿದ್ದ. ಮೈಸೂರು ಮೂಲದ ಒಡನಾಡಿ ಸಂಸ್ಥೆ ನೀಡಿದ ಮಾಹಿತಿ ಆಧರಿಸಿ ತನಿಖೆ ಮಾಡಿದಾಗ ಆರೋಪಿ ಹಾಗೂ ಮಗುವನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.