ಮಗು ಮಾರಾಟ ಪ್ರಕರಣ ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ

25 Raju 4
Published on

ಚಾಮರಾಜನಗರ : ಮನೆಯ ಸುತ್ತಮುತ್ತ ಮಗು ಮಾರಾಟ ಪ್ರಕರಣ ಕಂಡುಬಂದರೆ ಹೆದರದೆ ಕಾನೂನನ್ನು ಪಾಲನೆ ಮಾಡುವ ಮೂಲಕ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಕರ್ನಾಟಕ ಮಂಗಳ ಮುಖಿ ೌಂಡೇಷನ್ ಅಧ್ಯಕ್ಷೆ ಆರತಿ ಗೌಡ ಹೇಳಿದರು.


ನಗರದ ಸಮತಾ ಸೊಸೈಟಿಯಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಮಾರಾಟ ಮಾಡುವವರಿಗೆ ಮತ್ತು ಕೊಳ್ಳುವವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆಯಾಗುತ್ತದೆ ಎಂದರು.


ಸಮತಾ ಸೊಸೈಟಿ ಅಧ್ಯಕ್ಷೆ ಮತ್ತು ಸಂಶೋಧನಾ ವಿದ್ಯಾರ್ಥಿನಿ ದೀಪಾ ಬುದ್ಧೆ ಮಾತನಾಡಿ, ‘ನೆರೆ ಹಾವಳಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿ-ಗತಿ’ ಎಂಬ ನನ್ನ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಲು ಕ್ಷೇತ್ರ ಭೇಟಿ ನೀಡಿದ್ದ ವೇಳೆ ಬೇಬಿ ಎಂಬ ಮಹಿಳೆ ತಾನು ಜನ್ಮ ನೀಡಿದ ಮಗುವನ್ನು ಆಕೆಯ ಪತಿ ಬಸವ ಎಂಬುವರು ಮಾರಾಟಗಾಗಿರುವುದಾಗಿ ತಿಳಿಯಿತು. ಈ ವಿಷಯವನ್ನು ಲಿಂಗತ್ವ ಅಲ್ಪಸಂಖ್ಯಾತೆ ನಂದಿತಾ ಅವರು ನನ್ನ ಗಮನಕ್ಕೆ ತಂದರು.

ಆಗ ನಾನು ಬೆಬಿ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ ನನಗೆ ನನ್ನ ಮಗು ಬೇಕು ಎಂದು ಕೇಳಿಕೊಂಡರು. ಜತೆಗೆ ಆಕೆಯ ಪತಿ ಬಸವ ಮಗುವನ್ನು ಮಾರಾಟ ಮಾಡಿರುವ ಬಗ್ಗೆ ಮಾಹಿತಿ ನೀಡಿದಳು. ಕನ್ನಡದ ನಂ.1 ದಿನ ಪತ್ರಿಕೆ ವಿಜಯವಾಣಿ, ಪೊಲೀಸ್ ಇಲಾಖೆ, ಮಕ್ಕಳ ರಕ್ಷಣಾ ಘಟಕದ ಸಹಾಯದಿಂದ ತಂದೆಯಿಂದ ಮಾರಾಟವಾದ ಮಗುವನ್ನು ಮತ್ತೆ ತಾಯಿಗೆ ಸೇರಿಸುವ ಕಾರ್ಯ ಮಾಡಲಾಯಿತು. ಜಗತ್ತಿನಲ್ಲಿ ಪ್ರಸಿದ್ಧವಾದದ್ದು ತಾಯಿ ಮತ್ತು ಮಕ್ಕಳ ಸಂಬಂಧ. ಕರುಳಬಳ್ಳಿಯನ್ನ ಕಿತ್ತಿಕೊಳ್ಳುವ ಕೆಲಸವನ್ನು ಯಾರು ಮಾಡಬಾರದು ಎಂದರು.

ಜಿಲ್ಲಾಸ್ಪತ್ರೆಗೆ ಭೇಟಿ :
ನಗರದಲ್ಲಿ ವಾರದ ಹಿಂದೆ ಮಾರಾಟವಾಗಿ ಮಡಿಲು ಜಾರಿದ್ದ ಮಗು ಮತ್ತೆ ತಾಯಿಯ ಕೈ ಸೇರಿದ ಹಿನ್ನೆಲೆಯಲ್ಲಿ ಕರ್ನಾಟಕ ಮಂಗಳಮುಖಿ ೌಂಡೇಷನ್ ಅಧ್ಯಕ್ಷೆ ಆರತಿ ಗೌಡ ನಗರದ ಜಿಲ್ಲಾಸ್ಪತ್ರೆಯಲ್ಲಿರುವ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿರುವ ಮಗು, ತಾಯಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಸಖಿ ಕೇಂದ್ರದ ಸಿಬ್ಬಂದಿ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ ಸಖಿ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು. ಸಮತಾ ಸೊಸೈಟಿ ಅಧ್ಯಕ್ಷೆ ದೀಪಾ ಬುದ್ಧೆ, ಸಖಿ ಸೆಂಟರ್ ಆಪ್ತ ಸಮಾಲೋಚಕಿ ತೇಜಸ್ವಿನಿ, ಲೈಂಗಿಕ ಅಲ್ಪಸಂಖ್ಯಾತರಾದ ತ್ರಿಶಾ, ನಾಗಮ್ಮ, ಕಿರ್ತನಾ, ನಂದಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net