ಮಗು ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ

law
Published on

ಮಗು ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ

ಚಿಕ್ಕೋಡಿ: ಐದು ವರ್ಷದ ಮಗುವನ್ನು ಕೊಲೆ ಮಾಡಿದ ಅಪರಾಧಿಗೆ ಚಿಕ್ಕೋಡಿ 7ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 1,10,000 ರೂಗಳ ದಂಡ ವಿಧಿಸಿ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ಪ್ರಕಟಿಸಿದೆ.

ರಾಯಬಾಗ ತಾಲೂಕಿನ ಶಾಹುಪಾರ್ಕದ ನಿವಾಸಿಯಾದ ಪರಶುರಾಮ ಶ್ರೀಕಾಂತ ಜಾಧವ(37) ಶಿಕ್ಷೆಗೊಳಗಾದ ಅಪರಾಧಿ.

ಘಟನೆ ವಿವರ:

ಅಶೋಕ ಶಾಮರಾವ ಬಾಗಡಿ ಇತ ಲಕ್ಷ್ಮೀ ಅಶೋಕ ಬಾಗಡಿ ಎಂಬುವಳನ್ನು ವಿವಾಹವಾಗಿದ್ದನು.ಅಶೋಕ ಬಾಗಡಿ ಹಾಗೂ ಲಕ್ಷ್ಮೀ‌ ದಂಪತಿಗಳಿಗೆ ಐದು ಜನ ಮಕ್ಕಳಿದ್ದರು.ಅಪರಾಧಿ ಪರಶುರಾಮ ಶ್ರೀಕಾಂತ ಜಾಧವ ಲಕ್ಷ್ಮೀ ಹಾಗೂ ಅಶೋಕ ಬಾಗಡಿಯಿಂದ ಡೈವೊರ್ಸ ಕೊಡಿಸಿದ್ದನು. ತದ ನಂತರ ಲಕ್ಷ್ಮೀವೊಂದಿಗೆ ರಾಯಬಾಗ ತಾಲೂಕಿನ ಯಡ್ರಾಂವಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು.ಕೊನೆ ಮಗನಾದ ಮಹೇಶ ಬಾಗಡಿ(5) ಎಂಬಾತ ಇವರ ಜೊತೆ ವಾಸವಾಗಿದ್ದನು.ತಮ್ಮ ಸಂಸಾರಿಕ ಜೀವನಕ್ಕೆ ಅಡ್ಡಿಯಾಗುತ್ತಾನೆ ಎಂಬ ಕಾರಣ ಹಾಗು ಆಸ್ತಿಯಲ್ಲಿ ಪಾಲು‌ ನೀಡಬೇಕಾಗುತ್ತದೆ ಎಂಬ ಕಾರಣದಿಂದಾಗಿ ಅಪರಾಧಿ ಪರಶುರಾಮ ಶ್ರೀಕಾಂತ ಜಾಧವ ಮನೆಯಲ್ಲಿ ಯಾರು ಇಲ್ಲದೆ ಸಮಯ ನೋಡಿಕೊಂಡು ಮೆ.4-2019 ರಂದು 5 ವರ್ಷದ ಮಗು ಮಹೇಶನಿಗೆ ಲಟಣಿಗೆಯಿಂದ ಕೊಲೆ ಮಾಡಿದ್ದನು.ನಂತರ ಲಕ್ಷ್ಮೀ ಬಂದಾಗ ಕೊಲೆ ಮಾಡಿದ ವಿಷಯ ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲೆ ಮಾಡುವದಾಗಿ ಆಕೆಗೆ ಬೆದರಿಕೆ ಹಾಕಿದ್ದನು.ಈ ಕುರಿತು ರಾಯಬಾಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಅಂದಿನ ಸಿಪಿಐ ಎನ್ ಮಹೇಶ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ‌ನಡೆಸಿದ ನ್ಯಾಯಾಧೀಶರಾದ ತಾರಕೇಶ್ವರಗೌಡ ಪಾಟೀಲ ಅಪರಾಧ ಸಾಭಿತದ ಹಿನ್ನಲೆ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 1,10,000 ರೂಗಳ ದಂಡ ವಿಧಿಸಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ವೈ.ಜಿ.ತುಂಗಳ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net