ಮಗು ಅಪಹರಣ ಪ್ರಕರಣ ದಾಖಲು

Published on

ಹೊಸಪೇಟೆ: ಟೆಂಟ್‌ನಲ್ಲಿ ರಾತ್ರಿ ವೇಳೆ ಮಲಗಿದ್ದಾಗ ಮಗುವನ್ನು ಅಪಹರಣ ಮಾಡಿದ್ದಾರೆಂದು ಆರೋಪಿಸಿ ಹರಪನಹಳ್ಳಿ ಪಟ್ಟಣ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಾಗಿದೆ.

ಡಿ.16 ರ ರಾತ್ರಿ ಹರಪನಹಳ್ಳಿ ಪಟ್ಟಣದ ಯಮಹ ಷೋರೂಂ ಬಳಿ ಟೆಂಟ್‌ನಿAದ ಆರ್ಯನ್(1) ಎಂಬ ಮಗುವನ್ನು ಅಪಹರಿಸಿದ್ದಾರೆ ಎಂದು ಮಗುವಿನ ತಂದೆ ಯುವರಾಜ್ ಸಖರ್‌ಂ ಪವರ್ ದೂರು ನೀಡಿದ್ದಾರೆ. ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, ಸಾಧಾರಣಾವಾದ ಮೈಕಟ್ಟು ಹೊಂದಿದ್ದು, 2 ಅಡಿ ಎತ್ತರ ಇದ್ದು, ತೊದಲು ಮಾತನಾಡುತ್ತಾನೆ. ಸಾರ್ವಜನಿಕರ ಗಮನಕ್ಕೆ ಕಂಡುಬAದಲ್ಲಿ ವಿಜಯನಗರ ಕಂಟ್ರೋಲ್‌ರೂA 9480805700, ಪೊಲೀಸ್ ಅಧೀಕ್ಷಕರು 9480805701, ಹರಪನಹಳ್ಳಿ ಉಪಾದೀಕ್ಷಕ 9480805722, ವೃತ್ತ ನಿರೀಕ್ಷಕರು 9480805736, ಹರಪನಹಳ್ಳಿ ಪೊಲೀಸ್ ಠಾಣೆ 9480805776 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net