

ಕಲಬುರಗಿ: ಮನೆಯಲ್ಲಿನ ೮೯ ಗ್ರಾಂ ಬಂಗಾರ ಹಾಗೂ ೪ ಲಕ್ಷ ರೂ. ನಗದು ತೆಗೆದುಕೊಂಡು ಹೋಗಿ ಪ್ರಿಯಕನ ಜತೆ ಮದುವೆಯಾದ ಮಗಳಿಂದ ಬಂಗಾರ ಮತ್ತು ಹಣ ವಾಪಸ ಕೊಡಿಸುವಂತೆ ತಾಯಿ ದೂರು ನೀಡಿದ ಟನೆ ನಡೆದಿದೆ. ಶಿಕ್ಷಕಿ ಖೈರುನಿಸಾ ಬೇಗಂ ಹಾಗೂ ಅವರ ಪತಿ ರ‍್ಕಾರಿ ಕೆಲಸದಲ್ಲಿದ್ದಾರೆ. ಅವರ ಪುತ್ರಿ ಲಕನಾಜ್ ಮೇ ೨೪ರಂದು ಮನೆಯಲ್ಲಿ ಯಾರಿಗೂ ಹೇಳದೆ, ೮೯ ಗ್ರಾಂ ಬಂಗಾರ ಹಾಗೂ ೪ ಲಕ್ಷ ರೂ. ನಗದು ತೆಗೆದುಕೊಂಡು ಹೋಗಿದ್ದರು. ನಂತರ ಪ್ರಿಯಕರ ಮುಸ್ತಾಕ್ ಅಹ್ಮದ್ ಎಂಬಾತನ ಜತೆ ಮದುವೆ ಆಗಿದ್ದಖಯ, ಇದೀಗ ಅವರಿಂದ ಮನೆಯಿಂದ ತೆಗೆದುಕೊಂಡು ಹೋದ ಒಡವೆ ಮತ್ತು ಹಣ ವಾಪಸ್ ಕೊಡಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.