ಮಗಳನ್ನು ಹುಡುಕಿಕೊಡುವಂತೆ ತಂದೆ ಮನವಿ

Published on

ಕೊಳ್ಳೇಗಾಲ: ನನ್ನ ಮಗಳನ್ನು ನಮ್ಮ ಗ್ರಾಮದ ಯುವಕ ಕರೆದೊಯ್ದಿದ್ದು, ಆಕೆಯನ್ನು ಮದುವೆಯಾಗಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹರಿಬಿಟ್ಟಿದ್ದಾನೆ. ಕೂಡಲೇ ಇವರಿಬ್ಬರನ್ನೂ ಪತ್ತೆ ಮಾಡಿ ನಮಗೆ ನ್ಯಾಯ ಕೊಡಿಸಿ ಎಂದು ಹುಡುಗಿ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ನನಗೆ ಇಬ್ಬರು ಮಕ್ಕಳಿದ್ದು ದೊಡ್ಡ ಮಗಳಾದ ಮೇಘಾ ಎಸ್ಸೆಸ್ಸೆಲ್ಸಿ ಮುಗಿದ ನಂತರ ಮನೆಯಲ್ಲಿದ್ದಳು. ಪಕ್ಕದ ಮನೆಯ ವಿಜಯ್ ಅವರ ಪುತ್ರ ಅಪ್ಪು ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆಯನ್ನು ಮದುವೆಯಾಗಿರುವುದಾಗಿ 4 ಗಂಟೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತನ್ನ ಫೋಟೋವನ್ನು ಅಪ್ಲೋಡ್ ಮಾಡಿದ್ದಾನೆ. ಈತನಿಗೆ ತಂದೆ-ತಾಯಿ ಇಲ್ಲ. ಕುಡುಕನಾಗಿರುವ ಕಾರಣ ನನಗೆ ಸಹಜವಾಗಿ ಆತಂಕ ಮತ್ತು ಭಯವಿದೆ. ಹಾಗಾಗಿ ನನ್ನ ಪುತ್ರಿ ಮೇಘಾ ಮತ್ತು ಅಪ್ಪುನನ್ನು ವಿಚಾರಣೆ ನಡೆಸಿ ನ್ಯಾಯ ಕೊಡಿಸಬೇಕೆಂದು ತಾಲೂಕಿನ ಮುಳ್ಳೂರು ಗ್ರಾಮದ ಸಿದ್ದರಾಜು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕೋರಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net