ಮಗಳ ಮದುವೆ ದಿನವೇ ತಂದೆ ಸಾವು

somanna jampa
Published on

ಕಕ್ಕೇರಾ(ಯಾದಗಿರಿ): ಮಗಳ ಮದುವೆ ದಿನದ ಬೆಳಗ್ಗಿನ ಜಾವ ವಧುವಿನ ತಂದೆ ಮೃತಪಟ್ಟ ಘಟನೆ ಜಂಪಾರದೊಡ್ಡಿಯಲ್ಲಿ ಸೋಮವಾರ ನಡೆದಿದೆ. ಸೋಮಣ್ಣ ಸಿ.ಜಂಪಾ (೪೮) ಮೃತರು. ಸೋಮಣ್ಣ ಮದುವೆ ಸಿದ್ಧತೆ ಮಾಡಿಕೊಂಡು ರಾತ್ರಿ ಊಟ ಮಾಡಿ ಮನೆ ಮುಂದೆ ಮಲಗಿದ್ದ. ಕುಟುಂಬ ಸದಸ್ಯರು ಎಬ್ಬಿಸಲು ಪ್ರಯತ್ನಿಸಿದಾಗ ಕೊನೆಯುಸಿರೆಳೆದಿದ್ದು ತಿಳಿದಿದೆ. ಮೂರು ದಿನಗಳಿಂದ ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಸೂತಕ ಮನೆ ಮಾಡಿದೆ. ಮೃತ ತಂದೆಯ ಮುಖ ನೋಡಿ ಆಶೀರ್ವಾದ ಪಡೆದ ವಧು, ಹಿರಿಯರ ಸಮ್ಮುಖದಲ್ಲಿ ಹೊರಹಟ್ಟಿ ಗ್ರಾಮದಲ್ಲಿ ಮೊದಲೇ ನಿಶ್ಚಿತವಾಗಿದ್ದ ವರನನ್ನು ವರಿಸಿದ್ದಾಳೆ. ಆದರೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿಲ್ಲ. ತಂದೆ, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಸೋಮಣ್ಣ ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net