ತುರುವೇಕೆರೆ: ಪಟ್ಟಣದ ಕೆರೆಯಲ್ಲಿ ತಾಯಿ ಮಗು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಮೇಲಿನವರಗೇನಹಳ್ಳಿ ವಾಸಿ ಡಿ.ಶಶಿಕಲಾ(38) ಮಗ ಗೋಕುಲ್ (4) ಮೃತರು. ತಾಯಿ ಮಗನ ಜತೆಯಲ್ಲಿಯೇ ಹಗ್ಗ ಬಿಗಿದುಕೊಂಡು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಸುಮಾರು ದಿನಗಳಿಂದ ಪಟ್ಟಣದ ವಿದ್ಯಾನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೆರೆಗೆ ಬಿದ್ದು ಎರಡಮ್ಮೂರು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಪಟ್ಟಣದ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.