ಕುಣಿಗಲ್: ಪಟ್ಟಣದ ಐಸ್ಕ್ರೀಮ್ ಕಾರ್ಖಾನೆ ಮಾಲೀಕನ ಸಾವಿಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಗನಿಂದಲೇ ತಂದೆಯ ಕೊಲೆಯಾಗಿರಬಹುದು ಎಂದು ಕುಣಿಗಲ್ ಪೊಲೀಸರು ಶಂಕೆ ವ್ಯಕ್ತಪಡಿಸಿ ತನಿಖೆ ಕೆಗೊಂಡಿದ್ದಾರೆ. ತುಮಕೂರು ತಾಲೂಕು ಹೆಬ್ಬೂರು ಹೋಬಳಿ ತಿಮ್ಮಸಂದ್ರದ ನಿವಾಸಿ, ಕುಣಿಗಲ್ ಪಟ್ಟಣದ ಐಸ್ಕ್ರೀಮ್ ಕಾರ್ಖಾನೆಯ ಮಾಲೀಕ ನಾಗೇಶ್ (58) ಕಾರ್ಖಾನೆಯಲ್ಲಿ ಮೇ 10ರಂದು ಮೃತಪಟ್ಟಿದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ನಾಗೇಶ್ ಅವರ ಸಂಬಂಧಿ ಕುಣಿಗಲ್ ಠಾಣೆಗೆ ದೂರು ನೀಡಿದ್ದರು. ನಾಗೇಶನನ್ನು ಆತನ ಮಗ ಸೂರ್ಯ ಮತ್ತು ಆತನ ಸ್ನೇಹಿತರು ಸೇರಿ ವಿದ್ಯುತ್ ತಗುಲಿಸಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿ ಆರೋಪಿಯ ಪತ್ತೆಗೆ ತನಿಖೆ ಕೆಗೊಂಡಿದ್ದಾರೆ.