ಮಕ್ಕಳೊಂದಿಗೆ ಕುಳಿತು ಪಾಠ ಆಲಿಸಿದ ಸಿಇಒ

2507Aland1
ಆಳಂದ ತಾಲೂಕಿನ ನರೋಣಾ ಸರ್ಕಾರಿ ಪ್ರೌಢಶಾಲೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಭನ್ವರ್‌ಸಿಂಗ್ ಮೀನಾ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿದರು.
Published on

ಆಳಂದ: ನರೋಣಾ, ಧುತ್ತರಗಾಂವ್, ಜಿಡಗಾ ಸರ್ಕಾರಿ ಪ್ರೌಢ ಶಾಲೆಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಭನ್ವರ್‌ಸಿಂಗ್ ಮೀನಾ ಸೋಮವಾರ ದಿಢೀರ್ ಭೇಟಿ ನೀಡಿ ಶಾಲೆಗಳ ಸ್ಥಿತಿಗತಿ, ಬೋಧನೆ ಕ್ರಮ ಪರಿಶೀಲಿಸಿದರು.

ನರೋಣಾ ಪ್ರೌಢಶಾಲೆಯಲ್ಲಿ ಮಕ್ಕಳೊಂದಿಗೆ ತರಗತಿಯಲ್ಲಿ ಕುಳಿತು ಪಾಠ ಆಲಿಸಿ, ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡಬೇಕು. ಸರ್ಕಾರದಿಂದ ಸಿಗುವ ಎಲ್ಲ ಯೋಜನೆಗಳು ಮಕ್ಕಳಿಗೆ ಸಮರ್ಪಕವಾಗಿ ದೊರೆಯುವಂತೆ ಕ್ರಮವಹಿಸಿ ಎಂದು ಸೂಚಿಸಿದರು.

ಇದಕ್ಕೂ ಮೊದಲು ಮಕ್ಕಳೊಂದಿಗೆ ಸೇರಿ ಬಿಸಿಯೂಟ ಸವಿದರು. ಅಲ್ಲದೆ ಮೊಟ್ಟೆ, ಬಾಳೆಹಣ್ಣು, ಕೆನೆಭರಿತ ಹಾಲು, ಗುಣಮಟ್ಟದ ಪೌಷ್ಟಿಕ ಆಹಾರ ಕೊಡುತ್ತಿದ್ದಾರೋ ಎಂದು ಮಕ್ಕಳಿಗೆ ಕೇಳುವ ಮೂಲಕ ಸಮಸ್ಯೆ ಆಲಿಸಿದರು.

ಧುತ್ತರಗಾಂವ್, ಜಿಡಗಾ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದರು. ಗಣಕಯಂತ್ರ ಮತ್ತು ಡಿಜಿಟಲ್ ಕೋಣೆ ಸಮರ್ಪಕ ಬಳಕೆ ಕುರಿತು ಪರಿಶೀಲಿಸಿದರು.

ವಿಜಯಲಕ್ಷ್ಮೀ ಬಿರಾದಾರ್, ಅಕ್ಕಮಹಾದೇವಿ, ಪ್ರಾರ್ಥನಾ ಹಳ್ಳಿ, ಸುರೇಶ ಬಾಬಣ್ಣನವರ್, ರಾಹುಲ್ ಸಾಬï ಕೋಟೆಹಾಳ, ರಾಜಕುಮಾರ ಗೊಲ್ಲಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net