ಮಕ್ಕಳೇ ಪಾಲಕರ ನಿರೀಕ್ಷೆ ಹುಸಿ ಮಾಡದಿರಿ

Basavkalyan Collage
ಬಸವಕಲ್ಯಾಣದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಮಲ್ಲಮ್ಮ ಎಂ. ತಾಳಂಪಳ್ಳಿ ಉದ್ಘಾಟಿಸಿದರು. ಡಾ.ಅಶೋಕಕುಮಾರ ವಣಗೇರಿ, ಎನ್.ಆರ್. ಕೋಡ್ಲೆ, ಡಾ.ಅರುಣಕುಮಾರ ಎಲಾಲ್, ಪ್ರೇಮಸಾಗರ ಪಾಟೀಲ್, ಶಿವಕುಮಾರ ಸ್ವಾಮಿ ಇದ್ದರು.
Published on

ಬಸವಕಲ್ಯಾಣ: ಮಕ್ಕಳು ಪಾಲಕರ ನಿರೀಕ್ಷೆಗಳನ್ನು ಹುಡಿಗೊಳಿಸಬಾರದು ಎಂದು ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಮಲ್ಲಮ್ಮ ಎಂ. ತಾಳಂಪಳ್ಳಿ ಹೇಳಿದರು.

ಬಸವಕಲ್ಯಾಣ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಡಿಪ್ಲೊಮಾ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗಾಗಿ ಪಾಲಕರು ಮಾಡುವ ತ್ಯಾಗಕ್ಕೆ ಬೆಲೆ ಕಟ್ಟಲು ಆಗುವುದಿಲ್ಲ. ಮಕ್ಕಳು ತಮಗಿಂತ ಎತ್ತರಕ್ಕೆ ಬೆಳೆಯಬೇಕು ಎಂಬುದೇ ಅವರ ಆಸೆಯಾಗಿರುತ್ತದೆ. ಹೀಗಾಗಿ ಪಾಲಕರ ಅಪೇಕ್ಷೆಯನ್ನು ಈಡೇರಿಸುವುದು ಮಕ್ಕಳ ಕರ್ತವ್ಯ ಎಂದರು.

ಮನೋಬಲ. ಆತ್ಮಬಲವಿದ್ದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲುಯ ಸಾಧ್ಯ. ಅದನ್ನು ಸಾಧಿಸಲು ಸತತ ಪ್ರಯತ್ನಮಾಡಬೇಕು. ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಒಳ್ಳೆಯ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

ಪ್ರಾಚಾರ್ಯ ಎನ್.ಆರ್. ಕೋಡ್ಲೆ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು. ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕು. ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಮಾತನಾಡಿ, ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಬೇಕು ಎಂದು ಹೇಳಿದರು.

ಐಟಿಐ ಕಾಲೇಜಿನ ಪ್ರಾಚಾರ್ಯ ಶಿವಕುಮಾರ ಸ್ವಾಮಿ, ಇಂಜಿನಿಯರಿಂಗ್ ಕಾಲೇಜಿನ ಕಚೇರಿ ಅಧೀಕ್ಷಕ ವೃಷಿಕೇತ ಭೂಸಾರೆ ಮಾತನಾಡಿದರು.

ಇಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಚಾರ್ಯ ಡಾ.ಅರುಣಕುಮಾರ ಎಲಾಲ್, ಕುಲ ಸಚಿವ ಪ್ರೇಮಸಾಗರ ಪಾಟೀಲ್, ಶಂಕರ ಆಗರಗಿ ಇತರರಿದ್ದರು. ಯೋಗೇಂದ್ರಸಿಂಗ್ ಸ್ವಾಗತಿಸಿದರು. ವಿದ್ಯಾಸಾಗರ ನಿರೂಪಣೆ ಮಾಡಿದರು. ನೀಕತ್ ಫಾತಿಮಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net