ಮಕ್ಕಳು-ಮೊಬೈಲ್ ಮೇಲೆ ನಿಗಾ ಇರಲಿ

02.HBH. 4
Published on

ಹಗರಿಬೊಮ್ಮನಹಳ್ಳಿ: ಬಕ್ರೀದನ್ನು ಸಂಭ್ರಮ ಹಾಗೂ ಸೌಹಾರ್ದದಿಂದ ಆಚರಿಸಿ ಎಂದು ಕೂಡ್ಲಿಗಿ ಡಿವೈಎಸ್‌ಪಿ ಮಲ್ಲೇಶ ದೊಡ್ಡಮನಿ ಸಲಹೆ ನೀಡಿದರು.

ಪಟ್ಟಣದ ಠಾಣೆಯಲ್ಲಿ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು. ಕೆಲ ಕಿಡಿಗೇಡಿಗಳಿಂದ ಸೌಹಾರ್ದದ ವಾತಾವರಣ ಹದಗೆಡುತ್ತದೆ. ಇದರಿಂದ ಸಮಾಜ ಬಲಿಪಶುವಾಗುತ್ತದೆ. ಆದ್ದರಿಂದ ಮಕ್ಕಳು, ಮೊಬೈಲ್ ಹಾಗೂ ದ್ವಿಚಕ್ರ ವಾಹನಗಳ ಮೇಲೆ ನಿಗಾ ಇರಲಿ ಎಂದು ತಿಳಿಸಿದರು.

ಸಿಪಿಐ ವಿಕಾಸ್ ಲಮಾಣಿ ಮಾತನಾಡಿ, ತಾಲೂಕಿನಲ್ಲಿ ಶಾಂತಿಯುತ ವಾತಾವರಣ ಇದ್ದು, ಧಾರ್ಮಿಕ ಆಚರಣೆಗಳು ಕೂಡ ಶಾಂತಿಯುತವಾಗಿ ನಡೆಯುತ್ತಿವೆ. ಬೈಕ್ ವ್ಹೀಲಿಂಗ್ ಮಾಡುವುದು, ಶಾಲೆ, ಕಾಲೇಜ್ ಸುತ್ತಮುತ್ತ ಅನವಶ್ಯವಾಗಿ ತಿರುಗಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊಬ್ಬರನ್ನು ಕೆಣಕುವಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

ನಿವೃತ್ತ ಶಿಕ್ಷಕ ಬಾಷಾಸಾಬ್, ಮಾಬುಸಾಬ್, ಸೈಫುಲ್ಲಾ, ಇಸ್ಮಾಯಿಲ್, ಎ.ಹಮೀದ್‌ಸಾಬ್, ಪೀರ್‌ಸಾಬ್, ಎಚ್.ಕಲೀಲ್ ಸಾಬ್, ಬಾಬಾ ಫಕೃದ್ದೀನ್, ಸೈಯದ್ ಹಬೀಬ್‌ಸಾಬ್, ಡಿ.ಮಹ್ಮದ್ ಸಾಬ್, ಉಬೇದ್‌ಸಾಬ್, ನವೀನ್, ಮೂರ್ತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net