ಮಕ್ಕಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು

11Jaggu3
ಮಜಗಾವಿಯ ವಿಠ್ಠಲ-ರುಕ್ಮಿಣಿ ದೇವಸ್ಥಾನದಲ್ಲಿ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಕಾರ್ಯೋನ್ಮುಖರಾಗಿರುವ ಸುನೀತಾ ದೇಸಾಯಿ, ಸವಿತಾ ಪರನಟ್ಟಿ, ವೈಷ್ಣವಿ ಮುತಗೇಕರ, ಅಕ್ಷತಾ ಅಲ್ಠೇಕರ ಅವರನ್ನು ಸನ್ಮಾನಿಸಲಾಯಿತು.
Published on

ಬೆಳಗಾವಿ: ಮಜಗಾವಿಯ ಜಿಜಾವು ಮಹಿಳಾ ಮಂಡಳ ಹಾಗೂ ಗಿಜರೆ ಆಸ್ಪತ್ರೆ ವತಿಯಿಂದ ಮಜಗಾವಿಯ ವಿಠ್ಠಲ-ರುಕ್ಮಿಣಿ ದೇವಸ್ಥಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು. ಭಾತಕಾಂಡೆ ಶಾಲೆಯ ನಿವೃತ್ತ ಪ್ರಾಚಾರ್ಯೆ ಎಂ.ಎಸ್. ದಯಾ ಶಹಾಪುರಕರ ಮಾತನಾಡಿ, ಪ್ರಸ್ತುತ ಮಕ್ಕಳಿಗೆ ಮೊಬೈಲ್ ಗೀಳು ಹೆಚ್ಚಾಗುತ್ತಿದೆ. ಮಕ್ಕಳು ಶಾಲಾ ಪಠ್ಯ ಹಾಗೂ ಜ್ಞಾನ ಹೆಚ್ಚಿಸುವ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಖ್ಯಾತ ವೈದ್ಯ ಡಾ. ದತ್ತ ಪ್ರಸಾದ್ ಗಿಜರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಕಾರ್ಯೋನ್ಮುಖರಾಗಿರುವ ವೇಣುಧ್ವನಿ ಮಾಜಿ ಸಂಚಾಲಕಿ ಸುನೀತಾ ದೇಸಾಯಿ, ಸರಸ್ವತಿ ಗ್ರಂಥಾಲಯದ ಗ್ರಂಥಪಾಲಕಿ ಸವಿತಾ ಪರನಟ್ಟಿ, ಪೌಷ್ಟಿಕ ತಜ್ಞೆ ವೈಷ್ಣವಿ ಮುತಗೇಕರ ಹಾಗೂ ಅಕ್ಷತಾ ಅಲ್ಠೇಕರ ಅವರನ್ನು ಸನ್ಮಾನಿಸಲಾಯಿತು. ನಿವೇದಿತಾ ಮಜುಕರ್ ಪರಿಚಯಿಸಿದರು. ಹಲವು ಮಹಿಳೆಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net