ಮಕ್ಕಳಿಗೆ ಹೂವು ನೀಡಿ ಶಾಲೆಗೆ ಸ್ವಾಗತಿಸಿದ ಶಿಕ್ಷಕರು

2ss2supraja school
Published on

ಶನಿವಾರಸಂತೆ: ಸೋಮವಾರ ಶಾಲಾ-ಕಾಲೇಜು ಪ್ರಾರೋಂಭೋತ್ಸವ ದಿನ ಶನಿವಾರಸಂತೆ ವ್ಯಾಪ್ತಿಯಲ್ಲಿ ಬೆಳಗ್ಗೆ ಮಕ್ಕಳು ತಮ್ಮ ಶಾಲೆಗಳಿಗೆ ಹೊಸ ಹುರುಪಿನಿಂದ ಆಗಮಿಸಿದರು. ಸರ್ಕಾರಿ, ಖಾಸಗಿ ಅನುದಾನಿತ. ಅನುದಾನ ರಹಿತ ಶಾಲೆಗಳಲ್ಲಿ ಶಾಲಾ ಪ್ರವೇಶ ದ್ವಾರದಲ್ಲಿ ತಳಿರು ತೋರಣ ಕಟ್ಟಿ ಶಾಲೆಯನ್ನು ಅಲಂಕರಿಸಿದ್ದದರು.

ಮಕ್ಕಳು ಶಾಲೆಗೆ ಪ್ರವೇಶಿಸುತ್ತಿದ್ದಂತೆ ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ವಿದ್ಯಾರ್ಥಿಗಳಿಗೆ ಹೂವುಗುಚ್ಚ ನೀಡಿ ಬರ ಮಾಡಿಕೊಂಡರು. ಕೆಲವು ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಸ್ವಾಗತಿಸಿದರು. ಮೇ 29 ರಂದು ಶಾಲೆ ಪ್ರಾರಂಭಗೊಳ್ಳಬೇಕಿತ್ತು. ಆದರೆ ಕೊಡಗಿನಲ್ಲಿ ಬಾರಿ ಮಳೆಯಾಗಿದ್ದ ಹಿನ್ನೆಲೆ ಜಿಲ್ಲಾಧಿಕಾರಿ ಶಾಲಾ ಪ್ರಾರಂಭವನ್ನು ಮುಂದೂಡಿ ಆದೇಶ ನೀಡಿದ್ದರು. ಈ ಕಾರಣದಿಂದ 4 ದಿನ ತಡವಾಗಿ ಅಂದರೆ ಸೋಮವಾರದಿಂದ ಶಾಲೆ ಪ್ರಾರಂಭಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net