ಮಕ್ಕಳಿಗೆ ಹಬ್ಬದ ಸಾರ್ಥಕತೆ ತಿಳಿಸಿ

14Kush04
ಫಾತಿಮಾ ಕಾನ್ವೆಂಟ್ ಶಾಲೆಯಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಡಗರ ಸಂಭ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Published on

ಕುಶಾಲನಗರ: ಎಳ್ಳಿನಂತೆ ಶುದ್ಧ ಜೀವನ, ಬೆಲ್ಲದಂತೆ ಸವಿಬಾಳು ನಮ್ಮದಾಗಲಿ ಎಂದು ಫಾತಿಮಾ ಕಾನ್ವೆಂಟ್‌ನ ವ್ಯವಸ್ಥಾಪಕಿ ಸಿಸ್ಟರ್ ಸ್ಪಂದನಾ ಆಶಿಸಿದರು.

ಮಕರ ಸಂಕ್ರಾತಿ ಹಬ್ಬದ ಹಿನ್ನೆಲೆಯಲ್ಲಿ ಫಾತಿಮಾ ಕಾನ್ವೆಂಟ್‌ನಲ್ಲಿ ಶನಿವಾರ ಆಯೋಜಿಸಿದ್ದ ಸಂಕ್ರಾಂತಿ ಸಡಗರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕರ ಸಂಕ್ರಾಂತಿ ಹಬ್ಬಕ್ಕೆ ತನ್ನದೇ ಆದ ವಿಶೇಷತೆ ಇದೆ. ಹೀಗಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಎಳ್ಳು, ಬೆಲ್ಲ, ನೆಲಗಡಲೆ, ಕೊಬ್ಬರಿ, ಕಬ್ಬಿನೊಂದಿಗೆ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿದ ಬಳಿಕ ಮಕ್ಕಳು ತಮ್ಮ ಆಪ್ತರು ಹಾಗೂ ನೆರೆಹೊರೆಯವರಿಗೆ ಹಂಚಿ ಸಂಭ್ರಮಿಸುತ್ತಾರೆ. ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು ಎಂಬಂತೆ ಈ ಹಬ್ಬದ ಸಾರ್ಥಕತೆಯನ್ನು ಮಕ್ಕಳಿಗೆ ತಿಳಿಸುವ ಅವಶ್ಯಕತೆ ಇದೆ. ಸೂರ್ಯ ಮಕರ ರಾಶಿಗೆ ಪ್ರವೇಶ ಪಡೆಯುತ್ತಾನೆ. ಆತ ಜಗತ್ತಿನ ಶಕ್ತಿ. ಮಕ್ಕಳು ಕೂಡ ಅಂತಹ ಶಕ್ತಿ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಪರಸ್ಪರ ಎಳ್ಳು-ಬೆಲ್ಲ ನೀಡಿ ಶುಭ ಕೋರಿದರು. ಶಾಲೆಯ ಡಾ.ಸಿಸ್ಟರ್ ಜೆಸ್ವಿನಾ, ಸಿಸ್ಟರ್ ತೆರೇಸ್ ಆ್ಯನ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net