ಮಕ್ಕಳಿಗೆ ಸ್ವಚ್ಛತೆ ಅರಿವು ಉಂಟಾಗಬೇಕು

2bvr1
Published on

ಕೋಳಗುಂದ: ಸ್ವಚ್ಛತೆಯೇ ಭಗವಂತನ ಪೂಜೆ, ಸ್ವಚ್ಛತೆಯೆಂಬುದು ಗಾಂಧೀಜಿಯವರ ಕನಸಾಗಿದ್ದು ಅದನ್ನು ನನಸು ಮಾಡಲು ಪ್ರತಿಯೊಬ್ಬರೂ ಪಣತೊಡಬೇಕು ಎಂದು ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ ತಿಳಿಸಿದರು.

ಕೋಳಗುಂದ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಸ್ಮೈಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ಹೈಟೆಕ್ ಶೌಚಗೃಹವನ್ನು ಶನಿವಾರ ಉದ್ಘಾಟಿಸಿ ಮತನಾಡಿದರು.

ಬೆಂಗಳೂರಿನಿಂದ ಆಗಮಿಸಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಅತ್ಯಾಧುನಿಕ ಸುಸಜ್ಜಿತ ಶೌಚಗೃಹ ನಿರ್ಮಿಸಿದ ಸ್ಮೈಲ್ ಚಾರಿಟಬಲ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ. ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವಚ್ಛತೆಯ ಅರಿವು ಉಂಟುಮಾಡಬೇಕು. ಇದರಿಂದ ಭವಿಷ್ಯದಲ್ಲಿ ಸ್ವಚ್ಛ ಭಾರತ ಪರಿಕಲ್ಪನೆ ಸಾಕಾರವಾಗುತ್ತದೆ ಎಂದರು.

ಸ್ಮೈಲ್ ಚಾರಿಟಬಲ್ ಟ್ರಸ್ಟ್‌ನ ರಾಘವ್ ಬಲ್ಲಾಳ್, ಮುಖ್ಯಶಿಕ್ಷಕ ವಿ.ಎನ್.ಧನಂಜಯ್ ಮಾತನಾಡಿದರು. ಸ್ಮೈಲ್ ಸಂಸ್ಥೆಯ ರಾಜ್, ಇಂಜಿನಿಯರ್ ಕುಮಾರ್, ಎಸ್‌ಡಿಎಂಸಿ ನಿರ್ದೇಶಕ ದೇವಾರಾಜ್, ಶಿಕ್ಷಕರಾದ ನವೀನ್ ಕುಮಾರ್, ವಿರೂಪಾಕ್ಷಪ್ಪ, ಪ್ರಸನ್ನಕುಮಾರ್ ಸುರೆ, ಮಂಜನಾಯ್ಕ, ಕಲಾವತಿ, ಕುಮಾರ್‌ಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net