ಮಕ್ಕಳಿಗೆ ಸಿಹಿ ಹಂಚಿ ಸ್ವಾಗತ

31ark-5
Published on

ಅರಕಲಗೂಡು: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಬುಧವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿವಿಧ ಹೂವು, ತಳಿರು-ತೋರಣಗಳಿಂದ ಶಾಲೆಗೆ ಅಲಂಕರಿಸಿದ್ದ ಶಿಕ್ಷಕರು ಸಿಹಿ ವಿತರಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.
ಎರಡು ತಿಂಗಳ ರಜೆಯ ಮಜಾ ಕಳೆದ ಮಕ್ಕಳು, ಶಾಲೆ ಆರಂಭವಾಗುತ್ತಿದ್ದಂತೆ ಬ್ಯಾಗ್‌ಗಳನ್ನು ಬೆನ್ನಿಗೆ ಹಾಕಿಕೊಂಡು ಮೊದಲ ದಿನವೇ ಸಮವಸ್ತ್ರ ದೊಂದಿಗೆ ಶಾಲೆಗಳತ್ತ ಹೆಜ್ಜೆ ಹಾಕಿದರು.
ತಾಲೂಕಿನ ದುಮ್ಮಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಿಕ್ಷಕರು ಮಕ್ಕಳಿಗೆ ಬಲೂನ್, ಸಿಹಿ, ಬಟ್ಟೆ, ಪುಸ್ತಕ ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ಎರಡು ತಿಂಗಳಿಂದ ಅಜ್ಜಿ ಮನೆ, ಸಂಬಂಧಿಕರ ಊರು, ಪ್ರವಾಸ ಮತ್ತಿತರ ಕಡೆ ಸುತ್ತಾಟ ನಡೆಸಿದ್ದ ಮಕ್ಕಳು ಶಾಲೆಗೆ ಆಗಮಿಸುತ್ತಿದ್ದಂತೆ ಸ್ನೇಹಿತರನ್ನು ಕಂಡು ಕುಣಿದು ಕುಪ್ಪಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net