ಮಕ್ಕಳಿಗೆ ಸರಿಯಾದ ಸಮಯಕ್ಕೆ ಲಸಿಕೆ ನೀಡಲಿ

2manju5
Published on

ಬೆಳಗಾವಿ: ಮಕ್ಕಳು ಆರೋಗ್ಯವಾಗಿರಲು ಸರಿಯಾದ ಸಮಯದಲ್ಲಿ ಲಸಿಕೆ ನೀಡಬೇಕು. ಅದಕ್ಕೆ ಪಾಲಿಕೆಯ ಸದಸ್ಯರು ಸಹಕಾರ ನೀಡಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಶಿವಾನಂದ ಮಾಸ್ತಿಹೊಳಿ ಹೇಳಿದರು.

ನಗರದ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ನಗರ ಮಟ್ಟದ ಸಾರ್ವತ್ರಿಕ ಲಸಿಕೆ ಮತ್ತು ಇಂದ್ರಧನುಷ 5.0 ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಲಸಿಕಾಕರಣ ಮೂಲಕ ಭಾರತದಲ್ಲಿ ಕೋವಿಡ್​ ರೋಗವನ್ನು ಹೇಗೆ ನಿಮೂರ್ಲನೆ ಮಾಡಲಾಯಿತೋ ಅದೇ ರೀತಿಯಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಪೋಲಿಯೋ, ದಡಾರ, ರುಬೆಲ್ಲಾ, ಯರೋಗ ತಡೆಗಟ್ಟುವುದು ಅವಶ್ಯ ಎಂದರು.

ಕೇಂದ್ರ ಸರ್ಕಾರ ಹಂತ ಹಂತವಾಗಿ ಮಕ್ಕಳಿಗೆ ಉಚಿತ ಲಸಿಕೆಯನ್ನು ನೀಡುತ್ತದೆ. ಆದ್ದರಿಂದ ಲಸಿಕೆ ವಂಚಿತ ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕಿಸಬೇಕು. ಶಾಲೆಗಳಲ್ಲಿ ಶಿಕರರು, ಆಶಾ ಕಾರ್ಯಕರ್ತೆಯರು ಲಸಿಕೆ ಜಾಗೃತಿ ಜಾಥಾ ವಿವಿಧ ಸಭೆ ಮಾಡಿ ಮಕ್ಕಳಿಗೆ ಲಸಿಕೆ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ಹಾಕಿಸಿ ಅದನ್ನು ಹೆಚ್ಚಿನ ರೀತಿಯಲ್ಲಿ ಪ್ರಚಾರ ಮಾಡಿ ಎಂದು ಸಲಹೆ ನೀಡಿದರು.

ಪಾಲಿಕೆ ಮೇಯರ್​ ಶೋಭಾ ಸೋಮನಾಚೆ, ಉಪ ಮೇಯರ್​ ರೇಷ್ಮಾ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಮಹೇಶ ಕೋಣಿ, ಪಾಲಿಕೆ ಆರೋಗ್ಯ ಅಧಿಕಾರಿ ಡಾ.ಸಂಜಯ ಡುಮ್ಮಗೋಳ, ಸ್ಥಾಯಿ ಸಮಿತಿ ಸದಸ್ಯ ರವಿ ಧೋತ್ರಿ, ಪಾಲಿಕೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net