

ಮದ್ದೂರು: ಮಕ್ಕಳಿಗೆ ಆಚಾರ, ವಿಚಾರ, ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಕಲಿಸಿಕೊಟ್ಟು ಅವರನ್ನು ದೇಶದ ಉತ್ತಮ ಪ್ರಜೆಯನ್ನಾಗಿ ರೂಪಿಸಬೇಕಾಗಿರುವುದು ಪಾಲಕರು ಹಾಗೂ ಶಿಕ್ಷಕರ ಜವಾಬ್ದಾರಿ ಎಂದು ಶ್ರೀ ಕ್ಷೇತ್ರ ವೈದ್ಯನಾಥಪುರ ಜಂಗಮ ಮಠದ ಶ್ರೀ ರೇಣುಕಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಮಂಡ್ಯ ನಗರದ ವಿ.ವಿ. ರಸ್ತೆಯಲ್ಲಿರುವ ಮಂಡ್ಯ ಜಿಲ್ಲಾ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರ ಸಂಘದ ವತಿಯಿಂದ ಮದ್ದೂರು ತಾಲೂಕು ವೈದ್ಯನಾಥಪುರ ಜಂಗಮ ಮಠದಲ್ಲಿ ಭಾನುವಾರ ಆಯೋಜಿಸಿದ್ದ ಮನೆ ಮನೆಗೆ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿರು. ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆದು ದೇವರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವ ಮೂಲಕ ಸನ್ಮಾರ್ನದಲ್ಲಿ ನಡೆಯಬೇಕು. ಆಗ ಮಾತ್ರ ಉತ್ತಮ ಸಮಾಜ ಹಾಗೂ ನೆಮ್ಮದಿಯ ಬದುಕು ಕಾಣಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಂಡ್ಯದ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಎಸ್.ನಾಗರಾಜು ಮಾತನಾಡಿ, ವೈದ್ಯನಾಥಪುರ ಜಂಗಮ ಮಠದಲ್ಲಿ ಪ್ರತಿ ತಿಂಗಳು ಮನೆ ಮನೆಗೆ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಉಪಾಧ್ಯಕ್ಷ ಡಿ.ದ್ಯಾವಣ್ಣ, ವೀರಶೈವ ವಿದ್ಯಾರ್ಥಿನಿಲಯದ ಟ್ರಸ್ಟಿಗಳಾದ ಹುಲಿವಾನ ಶಿವಲಿಂಗಪ್ಪ, ಸಂಘದ ನಿರ್ದೇಶಕರಾದ ಎಚ್.ಸಿ.ಮಹದೇವಪ್ಪ, ಶಿವಕುಮಾರ, ಮಹಾದೇವಸ್ವಾಮಿ, ರುದ್ರಸ್ವಾಮಿ, ಕೆಂಪಯ್ಯ, ವೀರಭದ್ರಸ್ವಾಮಿ, ದೇವನೂರು ಜಗದೀಶ್, ಮಧುಸೂದನ್, ಮಹೇಶ್, ಮೋಹನ್, ಕವಿತಾ, ನವೀನ್, ಶಕುಂತಲಾ, ಹೊನ್ನಮ್ಮ, ಶಿವಪ್ರಕಾಶ್, ಮಲ್ಲೇಶ್, ಗುರುಶಾಂತಪ್ಪ, ಪುಟ್ಟಬುದ್ಧಿ, ಲಿಂಗದವರು, ಉಮೇಶ್ ಇದ್ದರು.