ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ

klb1
ಚಿಂಚೋಳಿ ತಾಲೂಕಿನ ಯಲಕಪಳ್ಳಿಯಲ್ಲಿ ಆಯೋಜಿಸಿದ್ದ ಶ್ರೀ ಶಾಂತಲಿAಗೇಶ್ವರ ಶಿವಯೋಗಿಗಳ ಪುಣ್ಯಸ್ಮರಣೆಯಲ್ಲಿ ಪೂಜ್ಯ ಚಿ.ದೊಡ್ಡಪ್ಪ ಅಪ್ಪ, ನ್ಯಾಯಾಧೀಶ ದೇವೇಂದ್ರ ಬಿರಾದಾರ, ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಅವರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಶ್ರೀ ಶಾಂತಲಿAಗಯ್ಯ ಸ್ವಾಮೀಜಿ, ಶ್ರೀ ರಾಚೋಟೇಶ್ವರ ಸ್ವಾಮೀಜಿ, ಶ್ರೀ ಸಿದ್ಧರಾಮ ಸ್ವಾಮೀಜಿ ಇತರರಿದ್ದರು.
Published on

ಚಿಂಚೋಳಿ: ವಿದೇಶಿ ಸಂಸ್ಕೃತಿಯಿAದಾಗಿ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಬಾಲ್ಯದಲ್ಲಿಯೇ ಪಾಲಕರು ಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕು ಎಂದು ಭರತನೂರ ವಿರಕ್ತ ಮಠದ ಶ್ರೀ ಗುರುನಂಜೇಶ್ವರ ಸ್ವಾಮೀಜಿ ಕಿವಿಮಾತು ಹೇಳಿದರು.

ಯಲಕಪಳ್ಳಿಯ ಶ್ರೀ ಅಮರೇಶ್ವರ ಹಿರೇಮಠದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಶ್ರೀ ಶಾಂತಲಿAಗೇಶ್ವರ ಶಿವಯೋಗಿಗಳ ಪುಣ್ಯಸ್ಮರಣೆ, ಧರ್ಮಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಅತಿಯಾದ ಮೊಬೈಲ್ ಬಳಕೆಯಿಂದಾಗಿ ಮಕ್ಕಳು ಪುಟ್ಟ ವಯಸ್ಸಿನಲ್ಲಿಯೇ ದಾರಿ ತಪ್ಪುತ್ತಿದ್ದಾರೆ. ಇಂದಿನ ಯುವಕರು ದೇಶದ ಭಾವಿ ಪ್ರಜೆಗಳಾಗಿದ್ದು, ಹೀಗಾಗಿ ಗುಣಮಟ್ಟದ ಶಿಕ್ಷಣದೊಂದಿಗೆ ಸಂಸ್ಕಾರಯುತ ಬದುಕು ನಡೆಸಬೇಕು ಎಂದು ಸಲಹೆ ನೀಡಿದರು.

ವಿಜಯಪುರನ e್ಞÁನ ಯೋಗಾಶ್ರಮದ ಶ್ರೀ ಅಮೃತಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ, ಮಾನವೀಯತೆ ಕಮ್ಮಿಯಾಗುತ್ತಿರುವುದರಿಂದ ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ. ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೆ, ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕಿದೆ ಎಂದರು.

ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಅವರು ಶ್ರೀ ಶಾಂತಲಿAಗ ಶಿವಯೋಗಿ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿz್ದೆÃನೆ. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಜನರ ಸಹಕಾರದಿಂದ ಒಂದಿಷ್ಟು ಒಳ್ಳೆಯ ಕೆಲಸಗಳಾಗಿವೆ. ನಾನು ಕಾರ್ಯ ನಿರ್ವಹಿಸಿದ ಠಾಣೆ ವ್ಯಾಪ್ತಿಯ ಯಲಕಪಳ್ಳಿ ಗ್ರಾಮಸ್ಥರು ನನ್ನ ಸೇವೆ ಗುರುತಿಸಿ ಪ್ರಶಸ್ತಿ ನೀಡಿದ್ದು ಸಂತೋಷವಾಗಿದೆ ಎಂದು ಹೇಳಿದರು.

ಶ್ರೀ ಅಮರಶ್ರೀ ಪ್ರಶಸ್ತಿ ಪುರಸ್ಕೃತ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ, ಶ್ರೀ ಶಾಂತಲಿAಗ ಶಿವಯೋಗಿ ಸೇವಾ ರತ್ನ ಪ್ರಶಸ್ತಿ ಪುರಸ್ಕೃತರಾದ ದೇವನಹಳ್ಳಿಯ ನ್ಯಾಯಾಧೀಶ ದೇವೇಂದ್ರ ಬಿರಾದಾರ, ವಿಜಯಪುರದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಶರಣಯ್ಯ ಭಂಡಾರಿಮಠ ಮಾತನಾಡಿದರು.

ಶ್ರೀಮಠದ ಪೀಠಾಧಿಪತಿ ಶ್ರೀ ಶಾಂತಲಿAಗಯ್ಯ ಸ್ವಾಮೀಜಿ ನೇತೃತ್ವ, ಬಣಮಗಿಯ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಟೆಂಗಿನಮಠದ ಶ್ರೀ ಸಿದ್ಧರಾಮ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರಮುಖರಾದ ಡಾ.ಅಮರನಾಥ ದೇಶಮುಖ, ಶಾಂತಕುಮಾರ ಸ್ವಾಮಿ ಕೇರಳ್ಳಿ, ಬಸವರಾಜ ಸಜ್ಜನ್, ಚನ್ನಯ್ಯ ಸ್ವಾಮಿ, ಸಿದ್ದಪ್ಪ ಪೊಲೀಸ್ ಪಾಟೀಲ್, ಸಿದ್ದಲಿಂಗಪ್ಪ ಪಸಾರ, ವಿಜಯಕುಮಾರ್ ಮಾಲಿಪಾಟೀಲ್, ಬಸವರಾಜ ನಾಗೂರು, ಮಲ್ಲಿಕಾರ್ಜುನ ಮಾಲಿಪಾಟೀಲ್, ರಮೇಶ ಹುನ್ನಳ್ಳಿ, ಅಡ್ಡೆಪ್ಪ ಹೂಗಾರ, ಸಿದ್ದಪ್ಪ ಮೋಳಕೇರಿ ಇತರರಿದ್ದರು.

ನಾಗಪ್ಪ ಮಾಲಿಪಾಟೀಲ ಸ್ವಾಗತಿಸಿದರು. ರೇವಣಸಿದ್ದಪ್ಪ ನಾಗೂರು ನಿರೂಪಣೆ ಮಾಡಿದರು. ಮಹಾಂತಗೌಡ ಪೊಲೀಸ್ ಪಾಟೀಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net