

ಹುಲಸೂರು: ಮಕ್ಕಳಿಗೆ ಉತ್ತಮ ಸಂಸ್ಕಾರ, ರಾಷ್ಟ್ರಭಕ್ತಿ ಸಹಿತ ಅಕ್ಷರ ಅಭ್ಯಾಸ ನೀಡಿದರೆ ದೇಶ ಮುಂದುವರಿಯಲು ಸಾಧ್ಯ ಎಂದು ಕೀರ್ತನಕಾರ ರಾಜೇಶ್ ಮಹಾರಾಜ ಹೇಳಿದರು.
ಗಡಿಭಾಗದ ಮೇಹಕರ್ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಂಗಳವಾರ ನಾಡ ಹಬ್ಬ ದಸರಾ ದಿನದಂದು ಶಿಕ್ಷಕರ ಬಳಗದಿಂದ ಮಂಗಳವಾರ ಏರ್ಪಡಿಸಿದ್ದ ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ದತ್ತಾ ಪವಾರ ಮಾತನಾಡಿ, ಪ್ರತಿಭೆಗೆ ಜಾತಿ, ಧರ್ಮದ ಭೇದವಿಲ್ಲ. ಪ್ರತಿಭೆಗೆ ಎಲ್ಲೆಡೆ ಬೆಲೆ ದೊರೆಯುತ್ತದೆ. ವಿದ್ಯಾರ್ಥಿಗಳು ಉತ್ತಮ ಜ್ಞಾನ ಸಂಪಾದಿಸಿಕೊಂಡು ಭವಿಷ್ಯ ರೂಪಿಸಿಕೊಳಬೇಕು ಎಂದರು.
ಹೀರಾಸಿಂಗ್ ಬೋವಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶೀತಲ ಕಾಂಬಳೆ ಹಾಗೂ ರಾಜೇಶ ಮಹಾರಾಜ, ಡಿಗಂಬರ್ ತೆಲಂಗ, ಗ್ರಾಪಂ ಅಧ್ಯಕ್ಷೆ ಶೀತಲ ಕಾಂಬಳೆ, ಉಪಾಧ್ಯಕ್ಷ ದಸ್ತಗಿರ್ ಶೇಖ್, ರಾಮೇಶ್ವರ ಮಹಾರಾಜ ಇತರರಿದ್ದರು. ಸಂಗಮೇಶ ಮಂಗಾಣೆ ನಿರೂಪಣೆ ಮಾಡಿದರು. ಉಲ್ಲಾಸ ಕಾಂಬಳೆ ವಂದಿಸಿದರು.