

ಕೊರಟಗೆರೆ: ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ರಕ್ತದಾನ, ಆರೋಗ್ಯ ಶಿಬಿರ ಹಾಗೂ ಸಾಧಕರನ್ನು ಸನ್ಮಾನಿಸುವ ಮೂಲಕ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಅವರ 40ನೇ ಜನ್ಮದಿನವನ್ನು ಭಕ್ತರು ಶುಕ್ರವಾರ ಅದ್ದೂರಿಯಾಗಿ ಆಚರಿಸಿದರು.
ಮಕ್ಕಳಿಗೆ ಅತ್ಯುತ್ತಮ ಬೋಧನೆ ಮಾಡಿ ಸಂಸ್ಕಾರ ಕಲಿಸಿದರೆ ಸ್ವಾಮೀಜಿಗಳ ಅವಶ್ಯಕತೆ ಬರುವುದಿಲ್ಲ ಎಂದು ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.
ಅನ್ನ, ನೀರು, ಶಿಕ್ಷಣಕ್ಕೆ ಜಾತಿಯಿಲ್ಲ. ಮಠದಲ್ಲಿ ಎಲ್ಲ ಸಮುದಾಯದ ಮಕ್ಕಳಿದ್ದಾರೆ. ಗುರುವಿಗೆ ಭಕ್ತರ ಭಯ. ಭಕ್ತನಿಗೆ ಗುರುವಿನ ಭಯವಿದ್ದರೆ ಗೊಂದಲ ಸೃಷ್ಟಿಯಾಗುವುದಿಲ್ಲ ಎಂದರು.
ಮಠದಲ್ಲಿ ಸಂಸತ ಪಾಠಶಾಲೆ, ಗೋಶಾಲೆ ಕಾರ್ಯನಿರ್ವಹಿಸುತ್ತಿದೆ. ಅನಾಥಾಲಯ, ಶಾಲಾ ಕಟ್ಟಡಕ್ಕೆ ಅಡಿಗಲ್ಲು ಹಾಕಲಾಗಿದೆ. ಮೂರು ಶಾಖಾ ಮಠಗಳನ್ನು ಸ್ಥಾಪಿಸಿದ್ದು ಇದನ್ನು ಶಿಕ್ಷಣ ಮತ್ತು ಕುಂಚಿಟಿಗರ ಕಾಶಿ ಮಾಡುವುದು ಮತ್ತು ಸಮುದಾಯಕ್ಕೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದೇ ಪರಮಧ್ಯೇಯ ಎಂದರು.
48 ಕುಲದೇವರ ಸ್ಥಾಪನೆಯೊಂದಿಗೆ ಆಧ್ಯಾತ್ಮಿಕ ಕೇಂದ್ರವನ್ನಾಗಿ ಎಲೆರಾಂಪುರ ಮಠವನ್ನು ರೂಪಸುವ ಇಚ್ಚೆ ಇದ್ದು, ನೀಲಿನೆ ತಯಾರಾಗಿದೆ ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಕೆಲ ಸ್ವಾಮೀಜಿಗಳು ರಾಜಕೀಯ ಮಾಡುತ್ತಾರೆ. ಆದರೆ ಹನುಮಂತನಾಥ ಶ್ರೀಗಳು ಸಮುದಾಯ ಮತ್ತು ಸಾಮಾಜಿಕ ಕಾರ್ಯಗಳಲ್ಲೇ ಸದಾ ಇರುತ್ತಿದ್ದು ಯಾವೊಂದು ಪಕ್ಷ ಅಥವಾ ರಾಜಕಾರಣಿಗಳ ಪ್ರಭಾವ ಶ್ರೀಗಳ ಮೇಲೆ ಇಲ್ಲ. ಇವರ ಮೇಲೆ ಭಕ್ತರ ಪ್ರಭಾವವೇ ಹೆಚ್ಚಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ತಹಸೀಲ್ದಾರ್ ನಹಿದಾ ಜಂ ಜಂ, ನಿರ್ದೇಶಕ ನರಸಿಂಹಮೂರ್ತಿ, ಕೌಶಲ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ, ಕುಂಚಿಟಿಗರ ಸಂದ ಮಹಿಳಾ ಅಧ್ಯೆ ಲಲಿತಾ ಮಲ್ಲಣ್ಣ, ಜಿಲ್ಲಾ ಕುಂಚಿಟಿಗರ ಸಂದ ಅಧ್ಯಕ್ಷ ಆರ್.ಕಾಮರಾಜ್, ಮಡಗಶಿರಾ ತಾಲೂಕು ಕುಂಚಿಟಿಗರ ಸಂದ ಅಧ್ಯಕ್ಷ ಅನಂತರಾಜು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಗೌರವಾಧ್ಯಕ್ಷ ಎಚ್.ಪಿ.ನಿಲೇಶ್, ಜಿಪಂ ಮಾಜಿ ಅಧ್ಯೆ ಸುನಂದ ಪಿ.ಕುಮಾರ್, ಮಾಜಿ ಸದಸ್ಯ ಪ್ರಸನ್ನಕುಮಾರ್, ಮುಖಂಡರಾದ ರುದ್ರೇಶ್, ಯು.ಲಕ್ಷಿ$್ಮಕಾಂತ, ಬೋಗಣ್ಣ, ಮಧು ಇದ್ದರು.
ವಿಶೇಷ ಧಾರ್ಮಿಕ ಕಾರ್ಯಕ್ರಮ: ಲ್ಮನರಸಿಂಹಸ್ವಾಮಿ ಸಮೇತ ಪರಿವಾರ ದೇವತಾ ಪ್ರತಿಷ್ಠಾಪನೆ, ಕಳಸಾರಾಧನೆ, ಮಹಾಗಣಪತಿ, ಪರಿವಾರ, ನೇತ್ರೋತ್ಮಿಲನ ಪ್ರಾಣ ಪ್ರತಿಷ್ಠಾ ತತ್ವನ್ಯಾಸಾದಿ, ಲಕ್ಷಿ$್ಮನರಸಿಂಹ, ಶ್ರೀ ಆಂಜನೇಯ, ಆದಿತ್ಯಾದಿ ನವಗ್ರಹ, ಪರಿವಾರ, ಪ್ರಾಯ@ಶ್ಚಿತ, ಮಹಾಪೂರ್ಣಾಹುತಿ ಹೋಮ ಹಾಗೂ ಮಂಗಳಾರತಿ, ಗೋದರ್ಶನ, ಸರ್ವಜನ ದರ್ಶನ, ಮಹಾಮಂಗಳಾರತಿ ನೆರವೇರಿಸಲಾಯಿತು.
ಏನೇನೂ ಇಲ್ಲದ ಭೂಮಿಯನ್ನು ಪುಣ್ಯ ೇತ್ರವನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಡಾ.ಹನುಮಂತನಾಥ ಶ್ರೀಗಳಿಗೆ ಸಲ್ಲುತ್ತದೆ, 5 ವರ್ಷಗಳಲ್ಲಿ ಇದೊಂದು ಅತೀ ದೊಡ್ಡ ಧಾರ್ಮಿಕ ೇತ್ರವಾಗಿ ಪರಿವರ್ತನೆಯಾಗಲಿದ್ದು, ರಾಜಕೀಯ ಅಧಿಕಾರ ಇರಲಿ, ಇಲ್ಲದಿರಲಿ ನಾನು ಯಾವಾಗಲೂ ಮಠದ ಭಕ್ತನಾಗಿ ಇರುತ್ತೇನೆ. > ಡಾ.ಜಿ.ಪರಮೇಶ್ವರ, ಶಾಸಕ ನನಗೆ ದೀೆಕೊಟ್ಟ ಆದಿಚುಂಚನಗಿರಿ ಪೀಠಾಧ್ಯಕ್ಷ ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಇಂದು ನನ್ನ ಸಾಧನೆ ನೋಡಿದ್ದರೆ ನನಗೆ ಜನ್ಮ ನೀಡಿದ ತಂದೆ&ತಾಯಿಗಿಂತಲೂ ಹೆಚ್ಚಿನ ಖುಷಿಪಡುತ್ತಿದ್ದರು. > ಡಾ.ಹನುಮಂತನಾಥ ಸ್ವಾಮೀಜಿ, ಪೀಠಾಧ್ಯಕ್ಷರು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠ