ಮಕ್ಕಳಿಗೆ ಸಂಸ್ಕಾರ ಕಲಿಸಿ

29. HBH. 1
Published on

ಹಗರಿಬೊಮ್ಮನಹಳ್ಳಿ: ಬೇಡ ಜಂಗಮ ಸಮಾಜದ ತಾಲೂಕು ಅಧ್ಯಕ್ಷರಾಗಿ ಜಿ.ಎಂ.ಜಗದೀಶ ಆಯ್ಕೆಯಾದರು.

ಪಟ್ಟಣದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಬೇಡ ಜಂಗಮ ಸಮುದಾಯದ ಸಂಘಟನಾತ್ಮಕ ಸಭೆಯಲ್ಲಿ ಮರಿಯಮ್ಮನಹಳ್ಳಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹಂಪಸಾಗರ ಮಠದ ರುದ್ರಮುನಿ ಶಿವಾಚಾರ್ಯರು, ಉತ್ತಂಗಿ ಸೋಮಶಂಕರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಬೇಡ ಜಂಗಮ ಸಮಾಜದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಇಂದುಮತಿ ತಿಪ್ಪೇಸ್ವಾಮಿ ಮಾತನಾಡಿ, ಮಕ್ಕಳಿಗೆ ಅಚಾರ, ಸಂಸ್ಕೃತಿ, ಸಂಸ್ಕಾರ ಕಲಿಸುವುದರೊಂದಿಗೆ ನಿತ್ಯ ವಿಭೂತಿ, ರುದ್ರಾಕ್ಷಿ ಧರಿಸುವುದನ್ನು ರೂಢಿ ಮಾಡಿಸಬೇಕು. ಮನೆಯಲ್ಲಿನ ಹಿರಿಯರು ಆಚರಣೆ ಮೊದಲು ಮಾಡಿದರೆ ಮಕ್ಕಳು ಸಹ ಅನುಕರಣೆ ಮಾಡುತ್ತಾರೆ ಎಂದರು.

ಪ್ರಮುಖರಾದ ಸುಭಾಷ್‌ಚಂದ್ರ ಶಾಸ್ತ್ರಿ, ಉಮಾಮಹೇಶ್ವರಯ್ಯ, ಸದ್ಯೋಜಾತಯ್ಯ, ನಾಗಯ್ಯಸ್ವಾಮಿ, ವಿಶ್ವನಾಥಯ್ಯ, ಸಿದ್ದೇಶ್ವರಯ್ಯ, ಜಿ.ಎಂ.ಹಂಪಯ್ಯ, ವೀರಭದ್ರಯ್ಯ, ಎಚ್.ಎಂ. ಕೊಟ್ರಯ್ಯ, ರಾಜು ಪಾಟೀಲ್, ಶಿವಶಂಕರ ಸ್ವಾಮಿ, ಕೆ.ಕೆ.ಬಿ.ಎಂ.ಕೊಟ್ರಯ್ಯ, ಕೆ.ಎಂ.ಆನಂದ ಸ್ವಾಮಿ, ಎಚ್.ಎಂ.ಶಿವಮೂರ್ತಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net