ಮಕ್ಕಳಿಗೆ ಸಂಸ್ಕಾರ ಕಲಿಸಿ

kls saree
ಕಳಸದಲ್ಲಿ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯಿಂದ ವೃದ್ಧೆಯರಿಗೆ ಸೀರೆ ವಿತರಿಸಲಾಯಿತು. ಸುಜಯಾ, ಅಮಿತಾ, ಚಂಪಾ ಎಂ. ರಾವ್, ಗಿರೀಶ್ ಇತರರಿದ್ದರು.
Published on

ಕಳಸ: ಹಿರಿಯರು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿದರೆ ಮಕ್ಕಳು ಅದನ್ನು ಪಾಲಿಸಿಕೊಂಡು ಹೋಗುತ್ತಾರೆ ಎಂದು ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಸುಜಯಾ ಸದಾನಂದ ಹೇಳಿದರು.

ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯಿಂದ ಶನಿವಾರ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಅಂಗವಾಗಿ ವೃದ್ಧರಿಗೆ ಸೀರೆ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೂವತ್ತು ವರ್ಷಗಳಿಂದ ಮಂಡಳಿಯ ಹಿರಿಯರು ಗಾಂಧಿ ಜಯಂತಿ ಅಂಗವಾಗಿ ವೃದ್ಧೆಯರಿಗೆ ಸೀರೆ ಕೊಡುವ ಆಚರಣೆ ನಡೆಸಿಕೊಂಡು ಬಂದಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಮುಂದಿನ ಪೀಳಿಗೆ ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.

ಉದ್ಯಮಿ ಕೆ.ಕೆ.ಬಾಲಕೃಷ್ಣ ಭಟ್ ಮಾತನಾಡಿ, ಗಾಂಧಿ ತತ್ವವನ್ನು ಮಹಿಳಾ ಮಂಡಳಿ ಸದಸ್ಯರು ಆಚರಿಸಿಕೊಂಡು ಹೋಗುತ್ತಿದ್ದಾರೆ. ಇಂಥ ಸೇವಾ ಕಾರ್ಯಗಳಿಂದ ಆತ್ಮತೃಪ್ತಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ವೃದ್ಧೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. 125ಕ್ಕೂ ಹೆಚ್ಚು ವೃದ್ಧೆಯರಿಗೆ ಸೀರೆ ವಿತರಿಸಲಾಯಿತು. ಮಂಡಳಿ ಸ್ಥಾಪಕರಾದ ಚಂಪಾ ಎಂ. ರಾವ್, ಕಳಸ ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಗಿರೀಶ್, ಮಂಡಳಿ ಸದಸ್ಯರಾದ ಫಾತಿಮಾ ರೆಹಮಾನ್, ಅಮಿತಾ ವಿನಾಯಕ, ಕಲ್ಪನಾ ಅಜಿತ್, ಆಶಾ ಗುರುರಾಜ್, ಶೋಭಾ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net