ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡಿ

PH 04
Published on

ಕಮಲಾಪುರ: ಬಂಜಾರ ಸಮುದಾಯವರು ಸೌಮ್ಯ ಸ್ವಭಾವದವರಾಗಿದ್ದು, ಕಾಯಕವನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಆಧುನಿಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರಣಗೌಡ ಪಾಟೀಲ್ ಹೇಳಿದರು.

ಮಡಕಿ ತಾಂಡಾದಲ್ಲಿ ಶ್ರೀ ನಾಗನಾಥ ದೇವರ ಜಾತ್ರೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿ, ಶ್ರೀ ಶಂಕರ ಮಹಾರಾಜರು ಚಿಕ್ಕ ವಯಸ್ಸಿನಲ್ಲಿಯೇ ಪೀಠದ ಜವಾಬ್ದಾರಿ ಹೊತ್ತು, ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಧರ್ಮ ಜಾಗೃತಿಯ ಜತೆಗೆ ಭಕ್ತರನ್ನು ಉದ್ಧರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಲಾಡಚಿAಚೋಳಿಯ ಶ್ರೀ ಸುನೀಲ್ ಮಹಾರಾಜ ಮಾತನಾಡಿ, ಬಂಜಾರ ಸಮಾಜವು ಸಂತ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳ ಮೇಲೆ ನೆಲೆ ನಿಂತಿದೆ. ಸಮಾಜದವರು ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.

ಶ್ರೀ ಶಂಕರ ಮಹಾರಾಜರನ್ನು ಭಕ್ತರು ಸತ್ಕರಿಸಿದರು. ಲಿಂಗಸೂಗೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಚೌಡಾಪುರದ ಶ್ರೀ ಮುರಹರಿ ಮಹಾರಾಜ, ಬಂಜಾರಾ ತಾಂಡಾದ ಶ್ರೀ ಲೋಕೇಶ ಮಹಾರಾಜ, ಹಲಕರ್ಟಿಯ ಶ್ರೀ ಸರಸ್ವತಿ ಮಾತಾ, ಗೊಬ್ಬುರವಾಡಿ ತಾಂಡಾ ಶ್ರೀ ಸುರೇಶ ಮಹಾರಾಜ, ಹತ್ಯಾಳ ತಾಂಡಾ ಶ್ರೀ ವಿಲಾಸ ಮಹಾರಾಜ, ಮಡಕಿ ತಾಂಡಾದ ಶ್ರೀ ನೀಲಕಂಠ ಮಹಾರಾಜ ಸಾನ್ನಿಧ್ಯ ವಹಿಸಿದ್ದರು.

ಪ್ರಮುಖರಾದ ಪ್ರೇಮಸಿಂಗ್ ಚವ್ಹಾಣ್, ಸುಭಾಷ ಮುರುಡಾ, ಕಲ್ಯಾಣರಾವ ಪಾಟೀಲ್, ರಾಮರತನ್ ಪಾಟೀಲ್, ಗೋರಕನಾಥ ರಾಠೋಡ್ ಇತರರಿದ್ದರು. ನಾಗನಾಥ ದೇವರಿಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂತೋಷ ರಾಠೋಡ್ ನಿರೂಪಣೆ ಮಾಡಿದರು. ವಿಶ್ವನಾಥ ರಾಠೋಡ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net