ಮಕ್ಕಳಿಗೆ ಶಿಕ್ಷಣದ ಜತೆ ಸಂಸ್ಕಾರ ಅಗತ್ಯ

Oplus_0
ಹುಲಸೂರಿನಲ್ಲಿ ಗುರುವಾರ ವಿದ್ಯಾ ಜ್ಯೋತಿ ಪ್ರೌಢಶಾಲೆಯ ೫ನೇ ವಾರ್ಷಿಕೋತ್ಸವವನ್ನು ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಉದ್ಘಾಟಿಸಿದರು. ಬಿಷಪ್ ರಾಬರ್ಟ್ ಮೈಕೆಲ್ ಮಿರಂಡಾ, ತಹಸೀಲ್ದಾರ್ ಶಿವಾನಂದ ಮೇತ್ರೆ, ಸುಧೀರ ಕಾಡಾದಿ ಇತರರಿದ್ದರು.
Published on

ಹುಲಸೂರು: ಮಕ್ಕಳು ಉನ್ನತ ಸ್ಥಾನ ಹೊಂದಬೇಕಾದರೆ ಶಿಕ್ಷಣ ಜತೆಗೆ ಉತ್ತಮ ಸಂಸ್ಕಾರ ಅಗತ್ಯವಾಗಿದೆ ಎಂದು ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ನುಡಿದರು.

ಪಟ್ಟಣದ ವಿದ್ಯಾಜ್ಯೋತಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿಲಾದ ೫ನೇ ಶಾಲಾ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ದಿನ ಬೆಳಗಾದರೆ ಕೊಲೆ, ಸುಲಿಗೆ, ದರೋಡೆಯಂತಹ ಹೀನಾಯ ಕೃತ್ಯಗಳು ಹೆಚ್ಚುತ್ತಿವೆ. ಎಲ್ಲರೂ ಜಾಗೃತರಾಗಿ ಒಬ್ಬರನ್ನೊಬ್ಬರು ಪ್ರೀತಿ-ಪ್ರೇಮದಿಂದ ಬಾಳಿ ಬದುಕಬೇಕು ಎಂದು ಹೇಳಿದರು.

ಕಲಬುರಗಿ ಪ್ರಾಂತ ಧರ್ಮಾಧ್ಯಕ್ಷ ಬಿಷಪ್ ರಾಬರ್ಟ್ ಮೈಕೆಲ್ ಮಿರಂಡಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವುದು ಅಗತ್ಯವಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಶಿಕ್ಷಣದ ಜತೆಗೆ ಸಂಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಬೋಸ್ಲೆ, ವಿದ್ಯಾ ಜ್ಯೋತಿ ಶಿಕ್ಷಣ ಸಂಸ್ಥೆಯ ಜುಲೇಟ್ ಕುಟಿನೋ, ತಹಸೀಲ್ದಾರ್ ಶಿವಾನಂದ ಮೇತ್ರೆ, ಜಿಪಂ ಮಾಜಿ ಸದಸ್ಯ ಸುಧೀರ ಕಾಡಾದಿ, ಪಿಎಸ್‌ಐ ಪಂಡಿತ, ಶಿಕ್ಷಣ ಸಂಸ್ಥೆ ವ್ಯವಸ್ಥಾಪಕಿ ಗೀತಾ, ಪ್ರಾಂಶುಪಾಲ ಮೇಬಲ್, ಬಿ.ಕೆ.ಶೈಲಜಾ, ಪಿಡಿಒಗಳಾದ ರಮೇಶ ಮಿಲಿಂದಕರ, ಬಸವರಾಜ ಬಾಲಕುಂದೆ, ಸಿಆರ್‌ಪಿ ಡಾ.ಧರ್ಮೇಂದ್ರ ಭೋಸ್ಲೆ, ಮಾರುತಿ ಬೇಂದ್ರೆ, ವೆಂಕಟ ಕುಂಬಾರ, ದೇವೇಂದ್ರ ನಂಜವಡೆ, ಅಶ್ವಿನಿ ಕೋಟಮಾಳೆ ಇದ್ದರು. ಆರ್ಯ ಜಾನಬಾ, ಜಾನ್ವಿ ಹಾರಕುಡೆ ಸ್ವಾಗತಿಸಿ ನಿರೂಪಣೆ ಮಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net