ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಅತ್ಯಗತ್ಯ

web2
ಬೈಲಹೊಂಗಲದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಉದ್ಘಾಟಿಸಿದರು. ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ ಇತರರು ಇದ್ದರು.
Published on

ಬೈಲಹೊಂಗಲ: ಸಮಾಜ ಸುಧಾರಿಸುವ ಶಕ್ತಿ ಶಿಕ್ಷಕರಲ್ಲಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ನೀಡುವುದು ಅತ್ಯವಶ್ಯವಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.

ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಯ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಮಕ್ಕಳ ಸಂಖ್ಯೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು. ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ತಾಪಂ ಇಒ ಸುಭಾಷ ಸಂಪಗಾಂವಿ, ಬಿ.ಎನ್.ಕಸಾಳೆ, ಶಿವಾನಂದ ಕುಡಸೋಮನ್ನವರ, ಅಜ್ಜಪ್ಪ ಅಂಗಡಿ, ಎನ್.ಆರ್.ಠಕಾಯಿ, ಇಸ್ಮಾಯಿಲ್ ತಿಗಡಿ, ಎಸ್.ಡಿ.ಗಂಗಣ್ಣವರ, ರಮೇಶ ದೊಡಗೌಡ್ರ, ಬಿ.ಡಿ.ತಮ್ಮನ್ನವರ, ಎಸ್.ಜಿ.ಬೆಳಗಾಂವಿ, ಬಿ.ಎನ್.ತಿಗಡಿ, ಎಂ.ಕೆ.ಹಾದಿಮನಿ, ಪಿ.ಎಸ್.ಪಾಟೀಲ, ಕೆ.ಯು.ಉಳ್ಳಾಗಡ್ಡಿ, ಆರ್.ಡಿ.ಹಿರೇಮಠ, ಎಂ.ಎಂ.ಸುತಗಟ್ಟಿ, ಚಂದ್ರು ಭಜಂತ್ರಿ, ಎಂ.ಸಿ. ಹಂಗರಕಿ, ಪಿ.ಸಿ.ಮಾಸ್ತಿಹೊಳಿ, ಪ್ರಕಾಶ ಮೆಳವಂಕಿ, ರಾಜು ಹಕ್ಕಿ, ಶಿಕ್ಷಕಿ ಮಹಾದೇವಿ ಅಂಗಡಿ, ಸಂತೋಷ ಪಾಟೀಲ ಇದ್ದರು.

ಖಾನಾಪುರ ವರದಿ: ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮುಖ್ಯ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಇಲ್ಲನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಶುಭ ಗಾರ್ಡನ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು. ಡಾ.ಚಿಂತಾಮಣಿ ಜೋರಾಪುರ, ಚನ್ನಬಸವ ಸ್ವಾಮೀಜಿ, ತಹಸೀಲ್ದಾರ್ ಪ್ರಕಾಶ ಗಾಯಕವಾಡ, ತಾಪಂ ಇಒ ವೀರನಗೌಡ ಏಗನಗೌಡರ, ಸುನೀಲ ಚಿಗುಳಕರ, ಶಿಕ್ಷಕರ ಸಂಘದ ಕಾರ್ಯದರ್ಶಿ ಸಲೀಂ ಕಿತ್ತೂರ, ವಿ.ಬಿ.ಹೊಸೂರ, ಟಿ.ಆರ್.ಪತ್ರಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಎಂ.ಪಾಟೀಲ, ಯಲ್ಲಪ್ಪ ಕೋಲ್ಕಾರ, ಬಿಇಒ ರಾಜೇಶ್ವರಿ ಕುಡಚಿ, ಎ.ಆರ್.ಅಂಬಗಿ, ಶಂಕರ ಕಮ್ಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net