

ನಂದೇಶ್ವರ: ವಿಜಯವಾಣಿ ವಿದ್ಯಾರ್ಥಿ ಮಿತ್ರ ಪತ್ರಿಕೆಯು ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸಲು ದಾರಿದೀಪವಾಗಿದ್ದು, ಸಂಗ್ರಹ ಯೋಗ್ಯ ಪತ್ರಿಕೆ ಎಂದು ಮುಖ್ಯಶಿಕ್ಷಕ ಕುಮಾರಸ್ವಾಮಿ ಮಠ ಹೇಳಿದರು.
ಸಮೀಪದ ಸತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಿಸಿ ಮಾತನಾಡಿದ ಅವರು, ಪತ್ರಿಕೆಯು ಮಕ್ಕಳಿಗೆ ಸಮಗ್ರ ಜ್ಞಾನ ಒದಗಿಸುತ್ತದೆ. ಕೇವಲ ಒಂದು ರೂಪಾಯಿಯಲ್ಲಿ ಎಂಟು ಪುಟಗಳ ಪುರವಣಿ ಒದಗಿಸುತ್ತಿರುವ ವಿಜಯವಾಣಿ ಪತ್ರಿಕೆ ಸಮೂಹಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು ಎಂದರು.
ಸಿ.ಆರ್.ಪಿ ಸುರೇಶ ರಜಪೂತ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನಿರಂತರ ಅಧ್ಯಯನಕ್ಕೆ ವಿದ್ಯಾರ್ಥಿಮಿತ್ರ ಸಹಕಾರಿ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಶಿವಪುತ್ರ ಬಾಡಗಿ, ಎಸ್.ಜಿ.ಚನಗೌಡರ, ಎ.ಎಸ್.ಗಸ್ತಿ, ಡಿ.ಕೆ.ಕರಡಿ, ಬಿ.ಎಂ.ಕುಂಬಾರ, ಕೆ.ಕೆ.ಅಸ್ಕಿ, ಡಿ.ಟಿ.ಪಾಟೀಲ, ಆರ್.ಪಿ.ಪುರಾಣಿಕ, ಎಸ್.ಎಸ್.ಮಾವಿನಹಳ್ಳಿ, ಎನ್.ಪಿ.ಖೋತ ಇತರರಿದ್ದರು.