

ಕೊಡೇಕಲ್: ಪಾಲಕರು ಮಕ್ಕಳಲ್ಲಿ ಆದರ್ಶ ಮ್ಯೌಲಗಳ ಜತೆಗೆ ಉತ್ತಮ ಸಂಸ್ಕಾರವನ್ನೂ ಹೇಳಿಕೊಡಬೇಕು ಎಂದು ಅಗಡಿ ಅಕ್ಕಿಮಠದ ಶ್ರೀ ಡಾ.ಗುರುಲಿಂಗ ಸ್ವಾಮೀಜಿ ಹಿತೋಪದೇಶ ನೀಡಿದರು.
ಶ್ರೀ ರಾಚೇಶ್ವರ ಶಿವಯೋಗಿಗಳ ೫೫೫ನೇ ಸ್ಮರಣೋತ್ಸವ ನಿಮಿತ್ತ ರಾಜನಕೋಳೂರದಲ್ಲಿ ಶುಕ್ರವಾರ ಶ್ರಾವಣ ಮಾಸ ಸಂಚಾರಿ ಶಿವಾನುಭ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ ನೀಡಿದ ಅವರು, ಕೊಡೇಕಲ್ ಗ್ರಾಮ ಕಾಲಜ್ಞಾನ ವಚನ ನೀಡಿದ ಬಸವಣ್ಣನವರ ಪಾವನ ಭೂಮಿಯಾದರೆ, ರಾಜನಕೋಳೂರು ಸ್ವಾತಂತ್ರ್ಯಹೋರಾಟಗಾರರು ಮತ್ತು ಯೋಧರನ್ನು ಕೊಡುಗೆ ನೀಡಿರುವ ವೀರಭೂಮಿ. ಗ್ರಾಮದ ಹಲವು ಯುವಕರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಪ್ರಮುಖರಾದ ಭೀಮನಗೌಡ ಗುಳಬಾಳ, ಭೀಮನಗೌಡ ಪಾಟೀಲ್, ತಮ್ಮಣ್ಣಗೌಡ ಅಳ್ಳಿಕೋಟಿ, ಭೀಮನಗೌಡ ಲಿಂಗದಳ್ಳಿ, ಬಿ.ಸಿ.ಪಾಟೀಲ್, ಸೋಮನಗೌಡ ಗುಳಬಾಳ, ಶರಣಗೌಡ ಉಳ್ಳೆಸೂರ, ರಾಮನಗೌಡ ವಠಾರ, ವೀರನಗೌಡ ಪಾಟೀಲ್, ತಿರುಪತಿಗೌಡ, ಶಿವರಾಜ ಬಿರಾದಾರ, ವಿರುಪಾಕ್ಷಪ್ಪ ಇತರರಿದ್ದರು. ಸಂಗಮೇಶ ಮತ್ತು ನಿಂಗಣ್ಣ ಸಂಗೀತ ಸೇವೆ ಸಲ್ಲಿಸಿದರು. ಸಂಚಾರಿ ಪ್ರವಚನದ ಬಸವ ಜ್ಯೋತಿ, ಬಸವಗ್ರಂಥಕ್ಕೆ ಮುತ್ತೈದೆಯರು ಆರತಿ ಮಾಡಿ ಸ್ವಾಗತಿಸಿದರು.