ಮಕ್ಕಳಿಗೆ ಬ್ಯಾಂಕ್‌ ವ್ಯವಹಾರದ ಅರಿವು

Agent
Published on

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಸಾಗರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಕೊಂಡ್ಲಹಳ್ಳಿ ಶಾಖೆಯಿಂದ ಸೋಮವಾರ ಬ್ಯಾಂಕ್‌ ವ್ಯವಹಾರ ಕುರಿತು ಕಾರ್ಯಕ್ರಮ ನಡೆಯಿತು.

ಬ್ಯಾಂಕ್‌ನ ಪ್ರತಿನಿಧಿ ವೀರೇಶ್, ಮಕ್ಕಳಿಗೆ ಬ್ಯಾಂಕಿನ ವ್ಯವಹಾರ, ಸೈಬರ್ ವಂಚನೆ, ಸುಕನ್ಯಾ ಸಮೃದ್ಧಿ, ಪಿಪಿಎಫ್ ಖಾತೆ ಕುರಿತು ಮಾಹಿತಿ ನೀಡಿದರು.

ಮುಖ್ಯಶಿಕ್ಷಕ ಮೊಹಮ್ಮದ್ ಇಸ್ಮಾಯಿಲ್, ಸಹ ಶಿಕ್ಷಕರಾದ ಜಿ.ಜಿ.ನಾಗರಾಜು, ಬಸಪ್ಪ, ಕೃಷ್ಣಮೂರ್ತಿ, ಜಯಲಕ್ಷ್ಮೀ, ವಿಜಯಲಕ್ಷ್ಮೀ, ಪೂಜಾ, ಲತಾ, ಎಸ್‌ಡಿಎಂಸಿ ಅಧ್ಯಕ್ಷ ಆಂಜನೇಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net