ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರ ನೀಡಬೇಕು: ಮಹಾವೀರ ಪಾಟೀಲ

27Kagwad3
ಶೇಡಬಾಳ ಪಟ್ಟಣದಲ್ಲಿ ಧರ್ಮ ಸಂಸ್ಕಾರ ಪಾಠಶಾಲೆ ಕಾರ್ಯಕ್ರಮ ಜರುಗಿತು. ಮಹಾವೀರ ಪಾಟೀಲ, ರವೀಂದ್ರ ನರಸಾಯಿ, ಡಾ.ರಾಜೇಂದ್ರ ಸಾಂಗಾವೆ, ಪ್ರಕಾಶ ನಾಂದ್ರೆ ಇತರರಿದ್ದರು.
Published on

ಕಾಗವಾಡ: ಬಾಲ್ಯದಲ್ಲಿಯೇ ಧರ್ಮ ಸಂಸ್ಕಾರ ನೀಡಿದರೆ ಮಕ್ಕಳು ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಐನಾಪುರದ ಮಹಾವೀರ ಪಾಟೀಲ ಹೇಳಿದರು.
ಶೇಡಬಾಳದ ಶ್ರೀ ವಿದ್ಯಾನಂದ ಮುನಿರಾಜ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಆಚಾರ್ಯ ವಿದ್ಯಾನಂದ ಮುನಿರಾಜ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮ ಸಂಸ್ಕಾರ ಪಾಠಶಾಲೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಾಶ್ಚಾತ್ಯ ಸಂಸತಿಗೆ ಮಾರುಹೋಗಿರುವ ಯುವಕರಿಗೆ ಭಾರತೀಯ ಸಂಸತಿ ಪರಿಚಯಿಸಬೇಕಿದೆ. ಬಾಲ್ಯದಲ್ಲಿಯೇ ನ್ಯಾಯ, ನೀತಿ, ಧರ್ಮ, ಸಂಸತಿ ಪಾಠ ಹೇಳಿ ಕೊಡುವುದು ಪಾಲಕರ ಕರ್ತವ್ಯ ಎಂದರು.
ರವೀಂದ್ರ ನರಸಾಯಿ, ಡಾ.ರಾಜೇಂದ್ರ ಸಾಂಗಾವೆ ಮಾತನಾಡಿದರು. ಸಂಸ್ಥೆಯ ಸಂಚಾಲಕ ಪ್ರಕಾಶ ನಾಂದ್ರೆ, ಡಾ.ಎಸ್​.ಬಿ.ಪಾಟೀಲ, ವೃಷಭ ಚೌಗಲಾ, ಎಂ.ಎ.ಗಣೆ, ಸನ್ಮತಿ ನಾಂದ್ರೆ, ಭರತೇಶ ಚಿಂಚವಾಡೆ, ಪ್ರಕಾಶ ಯಂದಗೌಡರ, ಸುನೀಲ ಇರಾಜ, ಬಾಹುಬಲಿ ನಾಂದ್ರೆ, ಆರ್​.ಡಿ.ಬುಲಾಕೆ, ಪ್ರವಿಣ ಸಾಬಣ್ಣವರ, ಪದ್ಮಶ್ರೀ ಹಂಚಿಬಟ್ಟಿ, ರುಚಿತಾ ದೇಸಾಯಿ, ವೈಶಾಲಿ ಕುಡಚೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net